Karnataka NewsLatest

*ಹೆಂಡತಿಯ ಮೂಗನ್ನು ಕಚ್ಚಿ ತುಂಡರಿಸಿದ ಗಂಡ*

ಪ್ರಗತಿವಾಹಿನಿ ಸುದ್ದಿ: ಪತಿ-ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿ ಪತಿ ಮಹಾಶಯ ಕೋಪದಲ್ಲಿ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸಿರುವ ಘಟನೆ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತಿ ವಿಜಯ್, ಪತ್ನಿ ವಿದ್ಯಾಳ ಮೂಗನ್ನು ಕಚ್ಚಿ ತುಂಡರಿಸಿದ್ದು, ಮೂಗು ಮುಖದಿಂದ ಬೇರ್ಪಟ್ಟು ಬಿದ್ದಿದೆ.

ತುಂಡಾಗಿರುವ ಮೂಗಿನ ಸಮೇತ ವಿದ್ಯಾ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪತಿ-ಪತ್ನಿ ನಡುವೆ ಸಾಲದ ವಿಚಾರವಗಿ ಗಲಾಟೆಯಾಗಿದೆ. ಸಿಟ್ಟಿಗೆದ್ದ ಪತಿ ವಿಜಯ್ ಪತ್ನಿ ಮೇಲೆ ಹಲ್ಲೆ ನಡೆಸಿ ಆಕೆಯ ಮೂಗನ್ನು ಕಚ್ಚಿ ತುಂಡರಿಸಿ ವಿಕೃತಿ ಮೆರೆದಿದ್ದಾನೆ.

ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button