Kannada NewsKarnataka NewsPolitics

*1,000 ದಿನ ಪೂರೈಸಿದ ರಾಜ್ಯ ಕಾಗ್ರೆಸ್ ಸರ್ಕಾರ: ಇಂದು ಐತಿಹಾಸಿಕ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ, ಹಾವೇರಿ : ರಾಜ್ಯ ಸರ್ಕಾರ 1,000 ದಿನಗಳ ಪೂರೈಸಿದ್ದು, ಇದರ ಅಂಗವಾಗಿ  ಬೃಹತ್ ಸಾಧನಾ ಸಮಾವೇಶ ಆಯೋಜನೆ ಮಾಡಿದೆ.

ಹಾವೇರಿಯ ಅಜ್ಜಯ್ಯನಗುಡಿ ಆವರಣದಲ್ಲಿ ನಡೆಯುವ ಸಮಾವೇಶದಲ್ಲಿ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ನೀಡಲು ಸಹ ಕ್ರಮ ಕೈಗೊಳ್ಳಲಾಗಿದೆ.ಇ-ಸ್ವತ್ತು ನೀಡಿದ ಗಣಕೀಕೃತ ದಾಖಲೆ. ನಕಲು ಮಾಡಲಾಗದ ಹಕ್ಕುಪತ್ರಗಳನ್ನು ವಿತರಿಸಲು ನಿರ್ಧಾರ ಮಾಡಲಾಗಿದೆ.

Home add -Advt

ಸಮಾವೇಶಕ್ಕಾಗಿ ಇಲ್ಲಿ 2.76 ಲಕ್ಷ ಚದರ ಅಡಿ ವಿಸ್ತೀರ್ಣದ ವೇದಿಕೆ ನಿರ್ಮಿಸಲಾಗಿದೆ. ‘ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ ಹೆಸರಿನಲ್ಲಿ ಬಾಗಿಲು ನಿರ್ಮಿಸಲಾಗಿದೆ. 70 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಿದ್ದು, 1.50 ಲಕ್ಷ ಮಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಹಾವೇರಿ ಜಿಲ್ಲೆಗೆ, ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳ ಜನರು ಬಂದು ಹೋಗಲು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಾಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಇನ್ನುಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರು, ಶಾಸಕರು ಹಾಗೂ ಗಣ್ಯರು ಕುಳಿತುಕೊಳ್ಳಲು ವೇದಿಕೆ ಸಿದ್ಧಪಡಿಸಲಾಗಿದೆ. ಹಾಗೆಯೇ 1 ಸಾವಿರ ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. 62 ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಜನರ ಸಾರಿಗೆ ವ್ಯವಸ್ಥೆಗಾಗಿ 175 ಬಸ್ ವ್ಯವಸ್ಥೆ ಮಾಡಲಾಗಿದೆ.

Related Articles

Back to top button