
ಪ್ರಗತಿವಾಹಿನಿ ಸುದ್ದಿ: ಅಣ್ಣನ ಮೇಲಿನ ದ್ವೇಷಕ್ಕೆ ತಮ್ಮನೊಬ್ಬ ಅಣ್ಣನ ಮೂರು ವರ್ಷದ ಮಗಳನ್ನೇ ಹತ್ಯೆಗೈದಿದ್ದ ಘಟನೆ ನಡೆದಿತ್ತು. ಈ ಘಟನೆ ಮಾಶುವ ಮುನ್ನವೇ ಇದೀಗ ಇಂತಹ್ಹೇ ಮತ್ತೊಂದು ಘಟನೆ ಬೆಂಅಗ್ಳೂರಿನ ಆನೇಕಲ್ ನಲ್ಲಿ ನಡೆದಿದೆ.
ಚಿಕ್ಕಪ್ಪನೊಬ್ಬ ಅಣ್ಣನ ಇಬ್ಬರು ಮಕ್ಕಳನ್ನೇ ರಾಡ್ ಹಾಗೂ ಕಲ್ಲಿನಿಂದ ಹೊಡೆದು ಕೊಂದಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ಬಳಿಯ ಕಮ್ಮಸಂದ್ರದಲ್ಲಿ ನಡೆದಿದೆ. ಖಾಸಿಂ ಎಂಬಾತ ತನ್ನ ಅಣ್ಣನ ಮಕ್ಕಳನ್ನೇ ಹತ್ಯೆಗೈದಿದ್ದಾನೆ.
ಇಶಾಕ್ (9) ಹಾಗೂ ಜುನೇದ್ (7) ಮೃತ ಬಾಲಕರು. ಮತ್ತೋರ್ವ ಬಾಲಕ ಮೊಹಮ್ಮದ್ ರೋಹನ್ (5) ಹಲ್ಲೆಯಿಂದ ಗಂಭೀರ ಸ್ಥಿತಿ ತಲುಪಿದ್ದಾನೆ.
ಪೋಷಕರು ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿದ್ದ ಅಜ್ಜಿ ತರಕಾರಿ ತರಲೆಂದು ಮಾರ್ಕೆಟ್ ಗೆ ಹೋಗಿದ್ದರು. ಮನೆಯಲ್ಲಿ ಮಕ್ಕಳಷ್ಟೇ ಇರುವುದನ್ನು ಗಮನಿಸಿ ಮನೆಗೆ ನುಗ್ಗಿದ ದುರುಳ,
ರಾಡ್ ಹಾಗೂ ಕಲ್ಲಿನಿಂದ ಹೊಡೆದು ಇಬ್ಬರು ಮಕ್ಕಳನ್ನು ಕೊಂದಿದ್ದಾನೆ. ಮತ್ತೋರ್ವ ಬಾಲಕ ಗಂಭೀರವಾಗಿ ಹಲ್ಲೆಗೊಳಗಾಗಿದ್ದಾನೆ.
ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.