Kannada NewsKarnataka NewsLatest

*ಕೃಷಿ ಜಾರಿ ದಳದ ಕಾರ್ಯಾಚರಣೆ: ಯೂರಿಯಾ ಅಕ್ರಮ ಸಾಗಾಟ ಲಾರಿ ವಶ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಕೃಷಿ ಜಾರಿದಳ ಚುರುಕುಗೊಳಿಸಲಾಗಿದ್ದು, ರಸಗೊಬ್ಬರ, ಕೀಟನಾಶಕಗಳ ಅನಧಿಕೃತ ದಾಸ್ತಾನು, ಸಾಗಾಟಗಳ ಮೇಲೆ ಕಣ್ಗಾವಲು ಇರಿಸಲಾಗಿದೆ. ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗುಂಡ್ಲುಪೇಟೆ ಬಳಿ ಕೇರಳಕ್ಕೆ ಸಾಗಿಸುತ್ತಿದ್ದ, ಯೂರಿಯಾ ತುಂಬಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ.

ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ನಿರ್ದೇಶನದ ಮೇರೆಗೆ ಅಪರ ನಿರ್ದೇಶಕ (ಜಾರಿದಳ) ದೇವರಾಜು ಅವರ ನೇತೃತ್ವದಲ್ಲಿ ಹಲವು ಕಡೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಗಿದೆ.

ಅ.4 ರಂದು ಖಚಿತ ಮಾಹಿತಿ ಮೇರೆಗೆ ಸಹಾಯಕ ಕೃಷಿ ನಿರ್ದೇಶಕರು, ನಂಜನಗೂಡು, ಗುಂಡ್ಲುಪೇಟೆ ಮತ್ತು ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ) ರ ತಂಡ ಮೂಲೆ ಹೊಳೆ ಸಿಬ್ಬಂದಿ ಗಳೊಂದಿಗೆ ಕಾರ್ಯಾಚರಣೆ ಮಾಡಿ ಕರ್ನಾಟಕ ಗಡಿಯಿಂದ ಅಂದಾಜು 1 ಕಿ.ಮೀ ದೂರ ಕೇರಳ ಗಡಿ ಪ್ರವೇಶಿಸುವಾಗ ಲಾರಿ ನಂ. ಕೆ.ಎಲ್ 73 ಡಿ 1699 ಪತ್ತೆಯಾಗಿದೆ. ಚಾಲಕ ಪರಾರಿಯಾಗಿರುತ್ತಾನೆ. ಲಾರಿಯನ್ನು ಕರ್ನಾಟಕ ಗಡಿಗೆತಂದು ಪರಿಶೀಲಿಸಿದಾಗ ಲಾರಿಯಲ್ಲಿ ಯೂರಿಯಾ ಇರುವುದು ಕಂಡು ಬಂದಿದೆ.

ಚಾಲಕ ಪರಾರಿಯಾದ ಹಿನ್ನೆಲೆಯಲ್ಲಿ ಬದಲಿ ಡ್ರೈವರ್ ಸಹಾಯದೊಂದಿಗೆ ಲಾರಿಯನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು ನಂತರ ಪ್ರಕರಣ ದಾಖಲಾಗಿರುವ ನಂಜನಗೂಡು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.

ಲಾರಿಯ ಒಟ್ಟು ತೂಕ 34.15 ಎಂ.ಟಿ ಇದ್ದು, ಸದರಿಗೊಬ್ಬರವನ್ನು ಕೇರಳ ರಾಜ್ಯಕ್ಕೆ ಕೈಗಾರಿಕಾ ಬಳಕೆಗಾಗಿ ಸಾಗಿಸಲಾಗುತ್ತಿತ್ತು ಎಂದು ಭಾವಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ. ಕಾರ್ಯಾಚರಣೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು (ಜಾರಿದಳ), ಸಹಾಯಕ ಕೃಷಿ ನಿರ್ದೇಶಕರು, ಗುಂಡ್ಲುಪೇಟೆ ಕೃಷಿ ಅಧಿಕಾರಿಗಳು ಭಾಗವಹಿಸಿರುತ್ತಾರೆ.

Home add -Advt

ಎಲ್ಲಾ ಗಡಿಗಳಲ್ಲಿ ಹೆಚ್ಚಿನ ಕಟ್ಟೆಚ್ಚರಕ್ಕೆ ಕೃಷಿ ಸಚಿವರ ಸೂಚನೆ: ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಕೃತಕ ಅಭಾವ ಉಂಟಾದ ಹಿನ್ನಲೆಯಲ್ಲಿ ಕೃಷಿ ಜಾಗೃತ ದಳ ಹಾಗೂ ಕೃಷಿ ಇಲಾಖೆಯ ಇತರೆ ಅಧಿಕಾರಿಗಳು ಇನ್ನಷ್ಟು ಕಟ್ಟೆಚ್ಚರ ವಹಿಸಲು ಸೂಚಿಸಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ಪ್ರತಿಯೊಂದು ದಾಸ್ತಾನು ಕೇಂದ್ರಗಳನ್ನು ತಪಾಸಣೆ ನಡೆಸಲು ನಿರ್ದೇಶನ ನೀಡಿದ್ದಾರೆ. ಗಡಿ ಭಾಗದಲ್ಲಿ ಸಂಚರಿಸುವ ಎಲ್ಲಾ ಸರಕು ಸಾಗಣೆ ವಾಹನಗಳ ಮೇಲೆ ವಿಶೇಷ ಕಣ್ಗಾವಲು ವಹಿಸಿ ತಪಾಸಣೆ ನಡೆಸಲು ಸಚಿವರುತಿಳಿಸಿದ್ದಾರೆ.
ರಾಜ್ಯದ ಒಳಗೂ , ಲಾರಿಗಳು ಹಾಗೂ ಗೂಡ್ಸ್ ವಾಹನಗಳ ತಪಾಸಣೆ ನಡೆಸಿ ಅನಧಿಕೃತ ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ನಿರ್ಭಂದಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.

ಇತರೆ ಪ್ರಕರಣಗಳ ವಿವರ:
ಇದೇ ಜು.18 ರಂದು ನಂಜನಗೂಡು ತಾಲ್ಲೂಕಿನಕೈಗಾರಿಕ ಪ್ರದೇಶದಲ್ಲಿರುವ ಶ್ರೀ ಇಂಡಸ್ಟ್ರೀಸ್, ಕೀಟನಾಶಕ ಉತ್ಪಾದನ ಘಟಕದಲ್ಲಿ ಅನಧಿಕೃತವಾಗಿ ಉತ್ಪಾದಿಸುತ್ತಿದ್ದ 170.50 ಲೀಟರ್ Profenophos 50% EC ಕೀಟನಾಶಕವನ್ನು ಜಪ್ತು ಮಾಡಲಾಗಿದೆ.
ಜು.23 ರಂದು ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕಿನ ತೆಂಡೆಕೆರೆ ಗ್ರಾಮದಿಂದ ಅನಧಿಕೃತವಾಗಿ ಸಾಗಿಸುತ್ತಿದ್ದ ಎಂ.ಎಫ್.ಎಲ್ ಕಂಪನಿಯ 100 ಚೀಲ ಯೂರಿಯಾ ಗೊಬ್ಬರವನ್ನು ಚನ್ನರಾಯಪಟ್ಟಣ ಟೌನ್ ಬಳಿ ಹಿಡಿದು, ಚನ್ನರಾಯಪಟ್ಟಣ ನಗರ ಪೋಲಿಸ್ ಠಾಣೆಗೆ ಒಪ್ಪಿಸಲಾಗಿದೆ. ಮುಂದಿನ ಕ್ರಮವಹಿಸಲು ಸಹಾಯಕ ಕೃಷಿ ನಿರ್ದೇಶಕರು, ಚನ್ನರಾಯಪಟ್ಟಣರವರಿಗೆ ತಿಳಿಸಲಾಗಿದೆ.


ಜು.25 ರಂದು ಶ್ರೀ ಚಾಮುಂಡೇಶ್ವರಿ ಟ್ರೇರ‍್ಸ್ ಮತ್ತು ಗ್ರೀನ್ ವೇ ಎಂಟರ್ ಪ್ರೆಸಸ್, ಬನ್ನೂರು, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ, ಇಲ್ಲಿ ರಸಗೊಬ್ಬರ ನಿಯಂತ್ರಣ (ನಿರವಯವ, ಸಾವಯವ ಅಥವಾ ಮಿಶ್ರಣ)ಆದೇಶ-1985ನ್ನು ಉಲ್ಲಂಘಿಸಿ ದಾಸ್ತಾನಿಕರಿಸಿ, ಮಾರಾಟ ಮಾಡುತ್ತಿದ್ದ ಬಯೋ ಸ್ಟಿಮ್ಯೂಲೆಂಟ್ಸ್ ಗಳಾದ GROW-R – 100 ಲೀಟರ್, ABDA GOlD – 1600 ಕೆ.ಜಿ, ZYME GOLD -500 ಕೆ.ಜಿ, SAGARIKa- 50 ಲೀಟರ್, SIVARIKA- -7000 ಕೆ.ಜಿ ಸೇರಿದಂತೆ ಒಟ್ಟು ರೂ -5,29,900/- ಮೌಲ್ಯದ ಬಯೋಸ್ಟಿಮ್ಯೂಲೆಂಟ್ಸ್ ಗಳನ್ನು ಜಪ್ತು ಮಾಡಲಾಗಿದೆ.

133 ಕೆ.ಜಿ. ಕೀಟ ನಾಶಕ ವಶ
ಗೃಹ ಬಳಕೆ ಕೀಟನಾಶಕ ತಯಾರಕ ಸಂಸ್ಥೆಯ ಮೇಲೆ ಜಾಗೃತಕೋಶ, ಸಚಿವಾಲಯ ವಿಭಾಗದ ಅಪರ ಕೃಷಿ ನಿರ್ದೇಶಕರಾದ ಶ್ ಹೆಚ್ಎಸ್ .ದೇವರಾಜು ಹಾಗೂ ಅವರ ತಂಡದ ಅಧಿಕಾರಿಗಳು ದಾಳಿ ನಡೆಸಿ ಕೀಟನಾಶಕ ಮಾರಾಟ ಪರವಾನಗಿ ಇಲ್ಲದೇ ತಯಾರಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದನ್ನು ಪತ್ತೆ ಹಚ್ಚಿ ವಶಪಡಿಸಿ ಕೊಂಡಿರುತ್ತಾರೆ.

ಬೆಂಗಳೂರು ನಗರಜಿಲ್ಲೆಯ ಸುಂಕದಕಟ್ಟೆಯಲ್ಲಿ ಮೆ||ಮುಕುಂದ್ ಇಂಡಸ್ಟ್ರೀಸ್ ಗೃಹ ಬಳಕೆ ಕೀಟನಾಶಕ ತಯಾರಿಕಾ ಘಟಕದಲ್ಲಿ ಕೀಟನಾಶಕ ಮಾರಾಟ ಪರವಾನಗಿಯನ್ನು ಪಡೆಯದೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕೃಷಿ ಇಲಾಖೆ ಜಾಗೃತ ಕೋಶ, ಸಚಿವಾಲಯ ವಿಭಾಗದ ಅಪರ ಕೃಷಿ ನಿರ್ದೇಶಕರಾದ ಶ ಹೆಚ್.ಎಸ್ ದೇವರಾಜು, ಜಂಟಿ ಕೃಷಿ ನಿರ್ದೇಶಕರಾದ ಶ್ರೀವಿದ್ಯಾನಂದ, ಉಪ ಕೃಷಿ ನಿರ್ದೇಶಕರಾದ ಅಶೋಕ್ ಅವರು ತಂಡದೊಂದಿಗೆ ದಾಳಿನಡೆಸಿ 50 ಸಾವಿರ ಮೌಲ್ಯದ 133.70 ಕೆ.ಜಿ ಗೃಹಬಳಕೆ ಕೀಟನಾಶಕವನ್ನು ವಶಕ್ಕೆ ಪಡೆದು ಜಪ್ತುಮಾಡಲಾಯಿತು. ಮೆ|| ಮುಕುಂದ್ ಇಂಡಂಸ್ಟ್ರೀಸ್ ಮಾಲೀಕರ ಮೇಲೆ ಕಾನೂನು ರೀತಿ ನ್ಯಾಯಾಲಯದಲ್ಲಿ ಮೊಕದ್ದಮೆ ಹಾಗಲಾಗುವುದು.

Related Articles

Back to top button