
ಪ್ರಗತಿವಾಹಿನಿ ಸುದ್ದಿ: ಸಂತೆಯಲ್ಲೆ ದುಷ್ಕರ್ಮಿಗಳು ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಸೋಮವಾರ ಸಂತೆ ದಿನ ಬಾಜಾರ ರಸ್ತೆಯಯಲ್ಲಿ ದುಷ್ಕರ್ಮಿಗಳು ಹುಸೇನ ಕಿಲ್ಲೇದಾರ (25) ಎಂಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೋಲೆ ಮಾಡಲಾಗಿದೆ.
ಮೃತ ಹುಸೇನ ಕಿಲ್ಲೇದಾರ ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ ನಿವಾಸಿ. ಇತನ ಕೋಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಹುಕ್ಕೇರಿ ಪೋಲಿಸರು ಆಗಮಿಸಿ ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹುಕ್ಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.