
ಪ್ರಗತಿವಾಹಿನಿ ಸುದ್ದಿ: ಅಗ್ನಿಶಾಮಕ ಕಚೇರಿ ಬಳಿಯೇ ಶಾಲಾವಾಹನವೊಂದು ಹೊತ್ತಿಉರಿದಿದ್ದಿದ್ದು, ಓರ್ವ ವ್ಯಕ್ತಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಬಳಿ ನಡೆದಿದೆ.
ಶಾಲಾ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಏಕಾಏಕಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲಾಗಿದೆ. ಆದರೆ ವಾಹನದಲ್ಲಿದ್ದ ಒರ್ವ ವ್ಯಕ್ತಿ ಸಜೀವದಹನವಾಗಿದ್ದಾರೆ.
ಸುಮಾರು 30 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದೆ. ಆದರೆ ಆತ ಯಾರು? ಶಾಲಾ ವಾಹನದಲ್ಲಿ ಆಂದಿದ್ದಾದರೂ ಯಾಕೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನೊಂದು ಮಾಹಿತಿ ಪ್ರಕಾರ ಈ ಶಾಲಾ ವಾಹನ ಕಳೆದ 2-3 ತಿಂಗಳಿಂದ ನಿಂತ ಜಾಗದಲ್ಲೇ ನಿಂತಿತ್ತು. ಭಿಕ್ಕ್ಷುಕರು, ದಾರಿ ಹೋಕರು ವಾಹನದಲ್ಲಿ ಹತ್ತಿ ಇಳಿದು ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಈಗ ವಾಹನಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ವ್ಯಕ್ತಿಯೊಬ್ಬ ಸುಟ್ಟು ಕರಕಲಾಗಿರುವುದು ಆತಂಕ ಮೂಡಿಸಿದೆ.