Kannada NewsKarnataka NewsLatest
*ಸಿಎಂ ವಿರುದ್ಧ ಕೊಲೆ ಆರೋಪ: ಮಹೇಶ್ ತಿಮರೋಡಿ ವಿರುದ್ಧ ಕೇಸ್ ದಾಖಲಿಸಲು ಗೃಹ ಸಚಿವರ ಸೂಚನೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ 28 ಕೊಲೆ ಆರೋಪ ಮಾಡಿರುವ ಮಹೇಶ್ ತಿಮರೋಡಿ ವಿರುದ್ಧ ಕೇಸ್ ದಾಖಲಿಸಲು ಗೃಹ ಸಚಿವ ಪರಮೇಶ್ವರ್ ಸೂಚನೆ ನೀಡಿದ್ದಾರೆ.
ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆ ತೀವ್ರಗೊಂಡಿರುವ ನಡುವೆಯೇ ಮಹೇಶ್ ತಿಮರೋಡಿ ಎಂಬಾತ ಸಿಎಂ ಸಿದ್ದರಾಮಯ್ಯ ವಿರುದ್ಧವೇ ಆರೋಪ ಮಾಡಿದ್ದು, ಸಿಎಂ ಸಿದ್ದರಾಮಯ್ಯ 28 ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವಿಚಾರ ವಿಧಾನಸಭೆಯಲ್ಲಿ ಗದ್ದಲ-ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್, ಮಹೇಶ್ ತಿಮರೋಡಿ ವಿರುದ್ಧ ಕೇಸ್ ದಾಖಲಿಸಿ ಬಂಧಿಸುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, ಯಾವುದೇ ಕ್ಷಣದಲ್ಲಿ ತಿಮರೋಡಿ ಬಂಧನವಾಗುವ ಸಾಧ್ಯತೆ ಇದೆ.