*ಕೃಷ್ಣ ಭಗವಾನರ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಉಪ ಆಯುಕ್ತ ಉದಯಕುಮಾರ ತಳವಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶ್ರಾವಣ ಮಾಸದಲ್ಲಿ ಮುಂಗಾರು ಮಳೆ ಇರುವ ಸಂದರ್ಭದಲ್ಲಿ ಜಗತ್ತು ಹಸಿರಿನಿಂದ ತುಂಬಿರುತ್ತದೆ ಇಂತಹ ಸಂದರ್ಭದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವುದು ಎಂದರೆ ಭಗವಂತನೆ ನಮಗೆ ಆಶೀರ್ವಾದ ಮಾಡಿದಂತೆ ತೋರುತ್ತದೆ. ಶ್ರೀ ಕೃಷ್ಣನ ಸಂದೇಶ ಮತ್ತು ಉಪದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ನಮ್ಮ ಜೀವನ ಸಂತೋಷದಿಂದ ಸಾಗುತ್ತದೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ (ಆ.19) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಕೃಷ್ಣರನ್ನು ನಾವೆಲ್ಲರು ನೆನೆಯಬೇಕು, ಬಾಲಕೃಷ್ಣನಾಗಿ ಜನಿಸಿ ಹಲವಾರು ಪವಾಡಗಳನ್ನು ಮಾಡಿ ದೇವರಾದಂತವರು ಶ್ರೀ ಕೃಷ್ಣ ಭಗವಾನರು, ಇವರು ಜಗತ್ತಿಗೆ ಬೆಳಕನ್ನು ನೀಡಿದಂತವ.ರು ಇವರ ಸಂದೇಶಗಳು ನಮ್ಮ ಜೀವನಕ್ಕೆ ಬಹಳಷ್ಟು ಉತ್ತಮ ದಾರಿಗಳನ್ನು ತೋರಿಸುತ್ತವೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ. ಸಂಜಯ ಶಿಂದಿಹಟ್ಟಿ ಅವರು ಮಾತನಾಡಿ ಹಲವಾರು ವರ್ಷಗಳಿಂದ ಕಲಾವಿದರಿಗೆ, ಸಾಹಿತಿಗಳಿಗೆ ಮತ್ತು ನಾಟಕಕಾರರ ಮನಸ್ಸಿನಲ್ಲಿ ನಿಂತು ಎಲ್ಲರ ಮನಸ್ಸನ್ನು ಮೃದು ಮಾಡಿರುವರು ಆದ್ಯಾತ್ಮ ಶಕ್ತಿ ಯಾವುದಾದರು ಇದ್ದರೆ ಅದು ಕೃಷ್ಣ ಪರಾಮಾತೃರು. ಶ್ರೀ ಕೃಷ್ಣ ಹಿಂದೂ ದೇವರುಗಳಲ್ಲಿ ಪ್ರಮುಖರಾಗಿ, ವಿಷ್ಣುವಿನ ಎಂಟನೆ ಅವತಾರವಾಗಿ, ಭಗವದ್ಗೀತೆಯ ಕೇಂದ್ರ ವ್ಯಕ್ತಿಯಾಗಿ, ದೇವರ ನೇರ ವಂಶಸ್ತನಾಗಿ ನಾವು ಕಾಣಬಹುದು.
ಉತ್ತರ ಪ್ರದೇಶದ ಮಥುರಾದಲ್ಲಿ ಜನಿಸಿ, ತಮ್ಮಲ್ಲಿರುವ ದೈವಿ ಶಕ್ತಿಯಿಂದ ಬಾಲ್ಯದಲ್ಲಿ ಹಲಾವಾರು ಪವಾಡಗಳನ್ನು ಮಾಡಿದ್ದನ್ನು ನಾವು ತಿಳಿದುಕೊಳ್ಳಬಹುದು, ಜನರಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನ ತಮ್ಮ ಬಾಲ್ಯದಲ್ಲಿ ವದೆ ಮಾಡಿದವರು ಶ್ರೀ ಕೃಷ್ಣ ಭಗವಾನರು. ಹೀಗೆ ಮುಂದೆ ಪಾಂಡವರ ರಾಜನಾಗಿರತಕ್ಕಂತಹ ಅರ್ಜುನನ ಸ್ನೇಹಿತನಾಗಿ ಮತ್ತು ಅವನ ಸಲಹೆಗಾರ ಆಗುತ್ತಾರೆ. ಕುರುಕ್ಷೇತ್ರದಲ್ಲಿ ಪಾಂಡವರಿಗೆ ಶ್ರೀ ಕೃಷ್ಣ ತನ್ನ ಸಂಪೂರ್ಣ ಸಾಕ್ಷಾತ್ಕಾರವನ್ನ ಆದ್ಯಾತ್ಮಿಕ ಸಾರ್ವತ್ರಿಕ ರೂಪವನ್ನ ಅಷ್ಟೇ ಅಲ್ಲದೆ ಮಾನವ ಹಾಗೂ ದೈವಿಕ ಅಂಶಗಳನ್ನ ತಿಳಿಸಿಕೊಡುತ್ತಾನೆ. ಒಟ್ಟಾರೆಯಾಗಿ ದೈವಿಕ, ಸ್ನೇಹಿತ, ಆದ್ಯಾತ್ಮಿಕ ಶಿಕ್ಷಕರಾಗಿ ನಾವು ನೋಡಬಹುದು ಎಂದು ವಿವರಿಸಿದರು.
ಮನುಷ್ಯನಿಗೆ ಕೋಪ ಒಳ್ಳೆಯದಲ್ಲಾ, ಮನುಷ್ಯ ತಾಳ್ಮೆ ಹಾಗೂ ಶಾಂತಿಯಿಂದ ಜಗತ್ತನ್ನೇ ಗೆಲ್ಲಬಹುದುದು ಮತ್ತು ತ್ಯಾಗಗಳನ್ನು ಮಾಡಿದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ನಾವು ಮಾಡುವ ಕಾಯದಲ್ಲಿ ತನು ಮನ ಧನದಿಂದ ಮಾಡಿದರೆ ಅದು ದೇವರಿಗೆ ಸಲ್ಲುತ್ತದೆ. ನಾಳೆ ಕುರಿತು ಚಿಂತೆ ಮಾಡಬೇಡಿ ಎಂದಿದ್ದಾರೆ, ಇಂದಿನ ಕ್ಷಣವನ್ನು
ಆನಂದದಿಂದ ಅನುಭವಿಸಬೇಕು. ಶ್ರೀ ಕೃಷ್ಣ ಪರಮಾತ್ಯರ ಉಪದೇಶಗಳು, ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಗೋಕಾಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಸಂಜಯ ಶಿಂದಿಹಟ್ಟಿ ಅವರು ವಿಶೇಷ ಉಪನ್ಯಾಸ ನೀಡಿದರು.
ಮಹಾನಗರ ಪಾಲಿಕೆ ಮಹಪೌರ ಮಂಗೇಶ ಪವಾರ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಜಿಲ್ಲಾ ಹಣಬರ ಯಾದವ ಸಂಘದ ಅಧ್ಯಕ್ಷ ಎಸ್ ಎ ಮುಂಡೆ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತಿತರಿದ್ದರು.