Belagavi NewsBelgaum NewsKannada NewsKarnataka NewsLatest

*ಹಿರಿಯ ನ್ಯಾಯವಾದಿ, ಕೆಎಲ್ಎಸ್ ಮಾಜಿ ಚೇರಮನ್ ಎಂ.ಆರ್.ಕುಲಕರ್ಣಿ ನಿಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹಿರಿಯ ನ್ಯಾಯವಾದಿ ಎಂ.ಆರ್.ಕುಲಕರ್ಣಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಪತ್ನಿ, ಓರ್ವ ಪುತ್ರ, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಕರ್ನಾಟಕ ಲಾ ಸೊಸೈಟಿ ಕಾರ್ಯದರ್ಶಿಯಾಗಿ, ಚೇರಮನ್ ಆಗಿ, ಕರ್ನಾಟಕ ಲಾ ಸೊಸೈಟಿಯ ಎಲ್ಲ ಅಂಗ ಸಂಸ್ಥೆಗಳ ಆಡಳಿತ ಮಂಡಳಿ ಚೇರಮನ್ ಆಗಿ ಅವರು ಸೇವೆ ಸಲ್ಲಿಸಿದ್ದರು.

Home add -Advt

ಸಧ್ಯ ಆರ್.ಎಲ್. ಕಾನೂನು ಕಾಲೇಜಿನ ಆಡಳಿತ ಮಂಡಳಿ ಚೇರಮನ್ ಆಗಿದ್ದರು. ಸರಕಾರಿ ವಕೀಲರಾಗಿಯೂ ಅವರು ಕೆಲಸ ನಿರ್ವಹಿಸಿದ್ದರು.

ಎಂ.ಆರ್.ಕುಲಕರ್ಣಿ ಅವರ ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ 10 ಗಂಟೆಗೆ ಹುಟ್ಟೂರಾದ ಶಿಂಧೋಳಿಯಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಹನುಮಾನ ನಗರದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಪುತ್ರ ಡಾ. ಪ್ರವೀಣ ಕುಲಕರ್ಣಿ ತಿಳಿಸಿದ್ದಾರೆ.

Related Articles

Back to top button