
ಪ್ರಗತಿವಾಹಿನಿ ಸುದ್ದಿ: ದೇವರೇ ಬಂದು ಮತ್ತೆ ಚುನಾವಣೆಗೆ ನಿಲ್ಲು ಅಂದ್ರೂ ಕೇಳಲ್ಲ. ಸಕ್ರಿಯ ರಾಜಕಾರಣದಲ್ಲಿ ಇರ್ತೇನೆ ಆದ್ರೆ, ಚುನಾವಣೆಗೆ ನಿಲ್ಲಲ್ಲ ಎಂದು ಹೇಳುವ ಮೂಲಕ ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಹೇಳಿದ್ದಾರೆ.
ತುಮಕೂರಲ್ಲಿ ಮಾತನಾಡಿದ ಅವರು, ತುಮಕೂರು-ಬೆಂಗಳೂರು ನಾಲ್ಕು ಪಥದ ರೈಲ್ವೆ ಮಾರ್ಗಕ್ಕೆ ಸರ್ವೆ ಆಯ್ತು ಡಿಪಿಆರ್ ಶುರು ಮಾಡಿಸಿದ್ದೇನೆ. ಇನ್ನೊಂದು ಐವತ್ತು ವರ್ಷಕ್ಕೆ ತೊಂದರೆಯಾಗಬಾರದು. ನನ್ನ ಭಾವನೆ ಅದೇ ರೀತಿಯಲ್ಲಿದೆ. ಅಧಿಕಾರವಿದ್ದಾಗ ಹೆಜ್ಜೆ ಗುರುತು ಬಿಟ್ಟು ಹೋಗಬೇಕು ಎಂಬುದು ನನ್ನ ಆಸೆಯಾಗಿದೆ.
ರೈಲ್ವೆ ಯೋಜನೆಗಳನ್ನು ಜಿಲ್ಲೆಗೆ ತರುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳು ಬರಲಿದೆ. ನಾನು ರಾಜಕೀಯ ಮಾಡಿಕೊಂಡು, ಯಾರನ್ನೋ ಹೊಗಳಿಕೊಂಡು ಹೋಗಲು ರಾಜಕೀಯಕ್ಕೆ ಬಂದಿಲ್ಲ ಎಂದು ತಿಳಿಸಿದ್ದಾರೆ.
ನಾನು ಇನ್ನು 50 ವರ್ಷ ಇರ್ತೀನೇನಪ್ಪ? ದೇವರೇ ಬಂದು ಮತ್ತೆ ಚುನಾವಣೆಗೆ ನಿಲ್ಲು ಅಂದ್ರೂ ಕೇಳಲ್ಲ. ನನ್ನ ಭಾವನೆ ಹಾಗಿದೆ ಎಂದು ಹೇಳಿರುವ ಮಾತುಗಳು ಬಿಜೆಪಿಯಲ್ಲಿ ಹೊಸ ಸಂಚಲನ ಉಂಟುಮಾಡಿದೆ.