*ಬೆಳಗಾವಿ ಬಿಮ್ಸ್ ವೈದ್ಯರ ಎಡವಟ್ಟು: ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾದ ರೋಗಿಯ ಕರುಳು ಕಟ್ ಮಾಡಿದ ವೈದ್ಯರು*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಬಿಮ್ಸ್ ಆಸ್ಪತ್ರೆ ಮತ್ತೊಂದು ಮಹಾ ಎಡವಟ್ಟು ಮಾಡಿಕೊಂಡಿದೆ. ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕನಿಗೆ ಆಪರೇಷನ್ ವೇಳೆ ಕರುಳು ಕಟ್ ಮಾಡಿರುವ ಘಟನೆ ನಡೆದಿದೆ.
ಮಹೇಶ್ ಮಾದರ್ ಎಂಬ ಯುವಕ ಜೂನ್ 20ರಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಹೊಟ್ಟೆ ನೋವೆಂದು ದಾಖಲಾಗಿದ್ದರು. ಅಂದೇ ವೈದ್ಯರು ಯುವಕನಿಗೆ ಆಪರೇಷನ್ ಮಾಡಿದ್ದರು. ಆಪರೇಷನ್ ವೇಳೆ ಹೊಟ್ಟೆಯಲ್ಲಿದ್ದ ಗಂಟನ್ನು ಹೊರತೆಗೆಯುವ ಬದಲು ಕರುಳು ಕಟ್ ಮಾಡಿ ಹೊರತೆಗೆದು ಹೊಲಿಗೆ ಹಾಕಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಯುವಕನನ್ನು ಮನೆಗೆ ಕಳುಹಿಸಿದ್ದಾರೆ.
ಮನೆಗೆ ಹೋದ ಯುವಕನಿಗೆ ಮತ್ತಷ್ಟು ವಿಪರೀತ ಹೊಟ್ಟೆ ನೋವು ಶುರುವಾಗಿದೆ. ಯುವಕ ಕೆ.ಎಲ್.ಇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವೇಳೆ ಸ್ಕ್ಯಾನಿಂಗ್ ಮಾಡಿದಾಗ ಕರುಳು ಕಟ್ ಆಗಿರುವುದು ಗೊತ್ತಾಗಿದೆ. ಸದ್ಯ ಕೆ ಎಲ್ ಇ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ.
ಯುವಕ ಆಪರೇಷನ್ ಗಾಗಿ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಬಿಮ್ಸ್ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳು ವಂತೆ ಕುಟುಂಬದವರು ಆಗ್ರಹಿಸಿದ್ದಾರೆ.