Karnataka NewsLatestPolitics

*ನಾನು ಮಾತನಾಡದಿರುವುದೇ ಲೇಸು ಎಂದ ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: ಡಿಸಿಎಂ ಡಿ.ಕೆ.ಶಿವಕುಮಾರ್ ತಾನು ಸದ್ಯಕ್ಕೆ ಮಾತನಾಡದಿರುವೇ ಲೇಸು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಾನು ಸತ್ಯ ಹೇಳಿದರೆ ಕೆಲವರು ಸಹಿಸಲ್ಲ. ನಾನು ಏನೇ ಹೇಳಿದರೂ ಅದರಲ್ಲಿ ತಪ್ಪು ಹುಡುಕುವುದೇ ಕೆಲವರ ಕೆಲಸ. ಹಾಗಾಗಿ ನಾನು ಮಾತನಾಡದಿರುವುದು ಒಳಿತು ಎಂದು ತಿಳಿಸಿದ್ದಾರೆ.

ನಾನು ಎಲ್ಲಿ ಏನೇ ಹೇಳಿದರೂ ಅದಕ್ಕೊಂದು ತಪ್ಪು ಕಂಡು ಹಿಡಿಯುವ ಕೆಲಸವಾಗುತ್ತಿದೆ. ಸದನದಲ್ಲಿರಲಿ, ಎಲ್ಲಿಯೇ ಇರಲಿ ಏನೇ ಮಾತನಾಡಿದರೂ ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ. ರಾಜಕೀಯದವರಿರಬಹುದು, ಮಾಧ್ಯಮದವರಿರಬಹುದು, ಪ್ರಮೋದಾ ದೇವಿ ಆರು, ಸಂಸದ ಯಧುವೀರ್, ವಿಧಾನಸಭೆ ಹೀಗೆ ಎಲ್ಲರೂ ನನ್ನ ಮಾತಿನಲ್ಲಿ ತಪ್ಪು ಹುಡುಕುವವರೇ. ಹಾಗಾಗಿ ನಾನು ಮಾತನಾಡದಿರುವುದೇ ಲೇಸು ಎಂದು ಹೇಳಿದರು.

ಏನೇ ವಿಚಾರ ಪ್ರತಿಕ್ರಿಯೆ ನೀಡಲು ಬೇರೆ ನಾಯಕರಿದ್ದಾರೆ, ಪಕ್ಷದ ವಕ್ತಾರರಿದ್ದಾರೆ. ಅವರ ಬಳಿ ಕೇಳಿಕೊಳ್ಳಿ ಎಂದು ಹೇಳಿದರು.

Home add -Advt


Related Articles

Back to top button