*ಬುದ್ಧಿವಂತ ಸಿನಿಮಾ ಸ್ಟೈಲಲ್ಲಿ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ವಂಚಿಸುವುದೇ ಈತನ ಕಾಯಕ*

ಪ್ರಗತಿವಾಹಿನಿ ಸುದ್ದಿ: ವಂಚಕರು ಮೋಸ, ವಂಚನೆ ಮಾಡಲು ಏನೆಲ್ಲ ನಾಅಟಕವಾಡುತ್ತಾರೆ ನೋಡಿ. ಇಲ್ಲೋರ್ವ ಖತರ್ನಾಕ್ ಆಸಾಮಿ ಬುದ್ಧಿವಂತ ಸಿನಿಮಾ ಸ್ಟೈಲ್ ನಲ್ಲಿ ಯುವತುಯರನ್ನು ಬಲೆಗೆ ಬೀಳಿಸಿಕೊಂಡು ಮದುವೆಯಾಗಿ ಕೈಕೊಟ್ಟು ಪರಾರಿಯಾಗುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ಪಟ್ಟೆಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್ ಯುವತಿಯರನ್ನು ಪರುಚಿಯಿಸಿಕೊಂಡು, ಪ್ರೀತಿ-ಪ್ರೇಮದ ನಾಟಕವಾಡಿ ಮದುವೆಯಾಗುತ್ತಿದ್ದ. ಆರು ತಿಂಗಳ ಸಂಸಾರ ಮಾಡಿ ಹಣ, ಒಡವೆ, ವಸ್ತ್ರಗಳನ್ನು ದೋಚಿ ಪರಾರಿಯಾಗುತ್ತಿದ್ದ. ಬಳಿಕ ಮತ್ತೊಂದು ಹುಡುಗಿಗೆ ಗಾಳ ಹಾಕಿ ಆಕೆಯೊಂದಿಗೂ ಇದೇ ರೀತಿ ಮೋಸದಾಟವಾಡಿ ಹಣ-ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದ. ಈತನಿಂದ ಮೋಸ ಹೋದ ಯುವತಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಮಿಥುನ್ ಕುಮಾರ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಯುವತಿಯೊಬ್ಬಳಿಕೆ ಪರಿಚಯನಾದ ಮಿಥುನ್ ಆಕೆಯನ್ನು ವರ್ಷದ ಹಿಂದೆ ವಿವಾಹವಾಗಿ ನಾಲ್ಕು ತಿಂಗಳು ಸಂಸಾರ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ದುಡ್ಡು, ಒಡವೆ ದೋಚಿಕೊಂಡು ಪರಾರಿಯಾಗಿದ್ದಾನೆ, ತಾಯಿ ಇಲ್ಲದ ಅಮಾಯಕ ಯುವತಿಯರೇ ಈತನ ಟಾರ್ಗೆಟ್. ಈ ಹಿಂದೆಯೂ ಇಂಥದ್ದೇ ಪ್ರಕರಣದಲ್ಲಿ ಜೈಲು ಸೇರಿದ್ದ ಮಿಥುನ್ ಜಾಮೀನು ಪಡೆದು ಬಿಡುಗಡೆಯಾಗಿ ಬಂದು ಮತ್ತದೇ ಹಳೆ ಚಾಳಿ ಮುಂದುವರೆಸಿದ್ದ. ಸದ್ಯ ಮತ್ತೆ ಜೈಲು ಸೇರಿದ್ದಾನೆ.