Film & EntertainmentKarnataka NewsLatest

ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ರನ್ಯಾ ರಾವ್ ಗೆ ಮತ್ತೊಂದು ಶಾಕ್ ಕೊಟ್ಟ DRI

ಪ್ರಗತಿವಾಹಿನಿ ಸುದ್ದಿ: ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿ ರನ್ಯಾ ರಾವ್ ಗೆ ಡಿಆರ್ ಐ ಅಧಿಕಾರಿಗಳು ಮತ್ತೊಂದು ಶಾಕ್ ನೀಡಿದ್ದಾರೆ.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಭಾರಿ ಮೊತ್ತದ ದಂಡ ಪಾವತಿಸುವಂತೆ ರನ್ಯಾರ್ ಗೆ ನೋಟಿಸ್ ನೀಡಿದ್ದಾರೆ. ಚಿನ್ನ ಸಾಗಾಟ ಪ್ರಕರಣದಲ್ಲಿ 102.55 ಕೋಟಿ ದಂಡ ಪಾವತಿ ಮಾಡುವಂತೆ ಡಿಆರ್ ಐ ನೋಟಿಸ್ ಜಾರಿ ಮಾಡಿದೆ. ಇಲ್ಲವಾದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಅಕ್ರಮ ಚಿನ್ನ ಸಾಗಾಟ ಕೇಸ್ ನಲ್ಲಿ ನಟಿ ರನ್ಯಾ ರಾವ್ ಅವರನ್ನು ಮಾರ್ಚ್ 4ರಂದು ಡಿಆರ್ ಐ ಬಂಧಿಸಿತ್ತು, ಕಳ್ಳಸಾಗಾಣೆ ವಸ್ತುಗಳನ್ನು ಡಿಆರ್ ಐ ಅಧಿಕಾರಿಗಳು 6 ತಿಂಗಳಲ್ಲಿ ವಸೂಲಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ.

Home add -Advt


Related Articles

Back to top button