*ಸೊಸೆಗೆ ವರದಕ್ಷಿಣೆ ಕಿರುಕುಳ: ನಿರ್ದೇಶಕ ಎಸ್. ನಾರಾಯಣ್ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪವನ್ ಹಾಗೂ ಸೊಸೆ ಪವಿತ್ರಾ ವಿವಾಹ ಜೀವನದಲ್ಲಿ ವಿರಸ ಮೂಡಿದೆ. ಪವಿತ್ರಾ ಅವರು ಪತಿ ಪವನ್, ಅತ್ತೆ ಭಾಗ್ಯವತಿ, ಮಾವ ಎಸ್.ನಾರಾಯನ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ.
ಸೊಸೆ ಪವಿತ್ರಾ ಜ್ಞಾನಭಾರತಿ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ನೀಡಿದ್ದು, ಎಸ್ ನಾರಾಯಣ, ಭಾಗ್ಯವತಿ ಹಾಗೂ ಪತಿ ಪವನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
2021ರಲ್ಲಿ ಪವಿತ್ರಾ ಹಾಗೂ ಪವನ್ ವಿವಾಹವಾಗಿದ್ದು, ಮದುವೆಯ ವೇಳೆ ವರದಕ್ಷಿಣ ಕೊಟ್ಟಿದ್ದರೂ ಇನ್ನೂ ಹೆಚ್ಚಿನ ವರದಕ್ಷಿಣೆ ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಇಡೀ ಮನೆಯನ್ನು ನಾನೇ ನಡೆಸುತ್ತಿದ್ದೇನೆ. ನನ್ನ ಪತಿ ಪವನ್ ಗೆ ಯಾವುದೇ ಕೆಲಸವಿಲ್ಲ. ಹಾಗಾಗಿ ನಾನೇ ಕೆಲಸ ಮಾಡಿ ಮನೆಯನ್ನೂ ನಡೆಸುತ್ತಿದ್ದೇನೆ ಎಂದು ದೂರು ನೀಡಿದ್ದಾರೆ.
ಈ ನಡುವೆ ಕಲಾಸಾಮ್ರಾಟ್ ಅಕಾಡೆಮಿ ತೆರೆಯಲು ಹಣಕ್ಕೆ ಬೇಡಿಕೆ ಇಡಲಾಯಿತು. ಆಗ ನಾನು ತಾಯಿಯ ಒಡವೆ ಅಡ ಇಟ್ಟು ಹಣ ನೀಡಿದ್ದೇನೆ. ಆದರೆ ಕಲಾ ಸಾಮ್ರಾಟ್ ಟೀಮ್ ಅಕಾಡೆಮಿ ಲಾಸ್ ಆಗಿ ಕ್ಲೋಸ್ ಆಯ್ತು. ಇಷ್ಟಾಗ್ಯೂ ನನ್ನ ಹೆಸರಲ್ಲಿಯೇ 10 ಲಕ್ಷ ಸಾಲ ಮಾಡಿ ಪತಿ ಪವನ್ ಗೆ ಕೊಟ್ಟಿದ್ದೇನೆ ಇಷ್ಟಾದರೂ ಇನ್ನೂ ಹಣ ನೀಡುವಂತೆ ಕೇಳಿದ್ದಾರೆ. ಮಾತ್ರವಲ್ಲ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.