
ಪ್ರಗತಿವಾಹಿನಿ ಸುದ್ದಿ: 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪದ ಮೇಲೆ ಯೋಗ ಗುರು ನಿರಂಜನಾ ಮೂರ್ತಿಯನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ರಾಜರಾಜೇಶ್ವರಿ ನಗರದಲ್ಲಿ ನಿರಂಜನಾ ಮೂರ್ತಿ ಯೋಗ ಕೇಂದ್ರ ನಡೆಸುತಿದ್ದರು. ಯೋಗ ಸೆಂಟರ್ ಗೆ ಬರ್ತಿದ್ದ ಅಪ್ರಾಪ್ತಗೆ ಲೈಂಗಿಕ ದೌರ್ಜನ್ಯ ಎಸಗಿರೋ ಆರೋಪದ ಅಡಿಯಲ್ಲಿ ಬಂಧನವಾಗಿದೆ.
17 ವರ್ಷದ ಬಾಲಕಿ ಮೇಲೆ ನಿರಂಜನಾ ಮೂರ್ತಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎನ್ನಲಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗದಲ್ಲಿ ಹೆಸರು ಬರುವಂತೆ ಶಿಫಾರಸು ಮಾತ್ತೇನೆ. ನಿನಗೆ ಸರ್ಕಾರಿ ಕೆಲಸವ ಸಿಗುವಂತೆ ಮಾಡ್ತೀನಿ ಎಂದು ಪುಸಲಾಯಿಸಿ ಖಾಸಗಿ ಅಂಗಗಳನ್ನು ಮುಟ್ಟಿ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ದೂರು ನೀಡಿದ್ದಾಳೆ.
ಈ ಹಿನ್ನೆಲೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿ ನಿರಂಜನಾಮೂರ್ತಿ ಬಂಧನವಾಗಿದೆ. ಕೇಸ್ ದಾಖಲಾಗಿದ್ದ ಬಳಿಕ ಆರೋಪಿ ಯೋಗಗುರು ತಲೆಮರೆಸಿಕೊಂಡಿದ್ದರು. ಸತತವಾಗಿ ಕಾರ್ಯಾಚರಣೆ ನಡೆಸಿ ನಿರಂಜನಾಮೂರ್ತಿ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ.