Kannada NewsKarnataka NewsLatestPolitics

*ವರ್ಗಾವಣೆ ದಂಧೆಯಲ್ಲಿ 500 ಕೋಟಿ ವಹಿವಾಟು; ಸರ್ಕಾರದ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ HDK*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, 500 ಕೋಟಿ ವಹಿವಾಟು ನಡೆದಿದೆ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ತಿಂಗಳಲ್ಲಿಯೇ ವರ್ಗಾವಣೆ ದಂಧೆಯಲ್ಲಿ 500 ಕೋಟಿ ವಹಿವಾಟು ನಡೆಸಿದೆ ಎಂದು ಆರೋಪಿಸಿದ್ದಾರೆ.

Home add -Advt

ಇಎಲ್ಲಾ ಇಲಾಖೆಯಲ್ಲಿಯೂ ವರ್ಗವಣೆ ದಂಧೆ ನಡೆದಿದೆ. ಇದನ್ನು ನಾನು ಹೇಳುತ್ತಿಲ್ಲ, ನಿನ್ನೆ ಅಧಿಕಾರಿಯೊಬ್ಬರು ಮಾತನಾಡುವಾಗ ಈ ವಿಚಾರ ಹೇಳುತ್ತಿದ್ದರು. ವರ್ಗವಣೆ ದಂಧೆಯಲ್ಲಿ 500 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ ಎಂದು. ನಾನು ಸದನದಲ್ಲಿ ವರ್ಗವಣೆ ದಂಧೆ ಮಾತನಾಡಿದಾಗ ಕಾಂಗ್ರೆಸ್ ನಾಯಕರು ನನ್ನ ಅವಧಿಯಲ್ಲಿ ನಡೆದಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯನವರ ಹೇಳಿಕೆಗೆ ಶಾಕ್ ಆದೆ. ನನ್ನ ಕಾಲದಲ್ಲಿ ಯಾವಾಗ ನಡೆಯಿತು? ನನ್ನ ಅವಧಿಯಲ್ಲಿ ವರ್ಗಾವಣೆಗೆ ಲಂಚ ಪಡೆದಿದ್ದು ಸಾಬೀತು ಮಾಡಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

Related Articles

Back to top button