
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬರುವ ಅ.10 ಮತ್ತು 11 ರಂದು ಗೋಕಾಕ ತಾಲೂಕಿನ ಖಣಗಾಂವ ಗ್ರಾಮದಲ್ಲಿ ಸಂಸ್ಕಾರ ಶಿಬಿರ ನಡೆಸುವ ನಿಮಿತ್ತ ಪೂರ್ವಭಾವಿ ಸಭೆ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಿತು.
ಸಭೆಯಲ್ಲಿ ಸಂಸ್ಕಾರ ಕಾರ್ಯಕ್ರಮದ ರೂಪರೇಷಗಳನ್ನು ಚರ್ಚಿಸಲಾಯಿತು. ಬಳಿಕ ಜಿಲ್ಲಾಮಟ್ಟದ ಕ್ರಿಯಾಶೀಲ ಶಿಕ್ಷಕಿ ಪ್ರಶಸ್ತಿ ಪಡೆದ ಹುಕ್ಕೇರಿ ತಾಲೂಕಿನ ಹಂಚನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಸುಜಾತಾ ನಾವಿ ಅವರಿಗೆ ಹಡಪದ ಸಮಾಜದ ಮುಖಂಡರು ಸನ್ಮಾನಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಶಿವಾನಂದ ಹುನ್ನೂರ್, ಉಪಾಧ್ಯಕ್ಷ ರಾಜಕುಮಾರ್ ನಾವಿ, ಸಂತೋಷ್ ನಾವಿ, ಕಾರ್ಯದರ್ಶಿ ಆನಂದ್ ಕುರ್ಲಿ, ಜಿಲ್ಲಾ ಖಜಾಂಚಿ ಸಾತಗೌಡ ನಾವಿ, ರಾಜ್ಯ ಮಾಜಿ ಉಪಾಧ್ಯಕ್ಷರು ಸಂತೋಷ್ ಹಡಪದ್, ಸಮಾಜದ ಗೌರವಾಧ್ಯಕ್ಷ ಸುರೇಶ್ ಹಡಪದ, ನಾಗಪ್ಪ ನಾವಿ, ರವಿ ಕೋರೆ, ಮಲ್ಲೇಶ್ ನಾವಿ, ಶ್ರೀಕಾಂತ್ ನಾವಿ, ಬೆಳಗಾವಿ ಜಿಲ್ಲಾ ಹಾಗೂ ತಾಲೂಕ ಅಧ್ಯಕ್ಷರು ಉಪಸ್ಥಿತರಿದ್ದರು.