Kannada NewsKarnataka NewsLatest

*ವಿಜಯಪುರ SBI ಬ್ಯಾಂಕ್ ದರೋಡೆ ಪ್ರಕರಣ: ಮಹಾರಾಷ್ಟ್ರದ ಮನೆ ಮೇಲೆ ಚಿನ್ನಾಭರಣ ಪತ್ತೆ*

ಪ್ರಗತಿವಾಹಿನಿ ಸುದ್ದಿ: ವಿಜಯಪುರ ಎಸ್ ಬಿಐ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ದ ಚಿನ್ನಾಭರಣಗಳು ಮಹಾರಾಷ್ಟ್ರದ ಮನೆಯೊಂದರ ಮೇಲೆ ಪತ್ತೆಯಾಗಿರುವ ಘಟನೆ ನಡೆದಿದೆ.

ಈ ಬಗ್ಗೆ ವಿಜಯಪುರ ಎಸ್ ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ. ವಿಜಯಪುರದ ಬ್ಯಾಂಕ್ ನಲ್ಲಿ ಕಳುವಾಗಿರುವ ಚಿನ್ನಾಭರಣ, ನಗದು ಹಣ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿರುವ ಮನೆಯೊಂದರ ಟೆರೇಸ್ ಮೇಲೆ ಬ್ಯಾಗ್ ನಲ್ಲಿ ಪತ್ತೆಯಾಗಿದೆ.

ಬ್ಯಾಗ್ ನಲ್ಲಿ ಕದ್ದ ಚಿನ್ನ, ಹಣವನ್ನು ಇಟ್ಟು ದರೋಡೆಕೋರರ ಗ್ಯಾಂಗ್ ಪರಾರಿಯಾಗಿದೆ. ಮನೆ ಮೇಲೆ ಟೆರೇಸ್ ಒಂದರಲ್ಲಿ ಬ್ಯಾಗ್ ಪತ್ತೆಯಾಗಿದ್ದು, ಅದರಲ್ಲಿ 6 ಕೆಜಿ ಚಿನ್ನಾಭರಣ, 41.4 ಲಕ್ಷ ನಗದು ಹಣ ಪತ್ತೆಯಾಗಿದೆ. ಉಳಿದ ಹಣ, ಚಿನ್ನದೊಂದಿಗೆ ದರೋಡೆ ಕೋರರು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

Home add -Advt

ವಿಜಯಪುರ ಎಸ್ ಬಿಐ ಬ್ಯಾಂಕ್ ನಲ್ಲಿ 20ಕೆಜಿ ಚಿನ್ನಾಭರಣ, ಹಣ ಕಳುವಾಗಿತ್ತು. ಇದೀಗ 6 ಕೆಜಿ ಚಿನ್ನಾಭರಣ, 41.4 ಲಕ್ಷ ಹಣ ಪತ್ತೆಯಾಗಿದೆ. ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

Related Articles

Back to top button