Belagavi NewsBelgaum NewsSports

*ರಾಜ್ಯ ಮಟ್ಟದ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್: ಬೆಳ್ಳಿ ಪದಕ ಗೆದ್ದ ಬೆಳಗಾವಿ ಬಾಲಕಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಕರ್ನಾಟಕ ಅಮೆಚೂ‌ರ್ ಸೈಕ್ಲಿಂಗ್ ಸಂಸ್ಥೆ ಜಮಖಂಡಿ ಇವರ ವತಿಯಿಂದ ಸೆ. 14 ಮತ್ತು 15, 2025 ರಂದು ನಡೆದ ರಾಜ್ಯ ಮಟ್ಟದ 20ನೇ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಬೆಳಗಾವಿ ಕ್ರೀಡಾ ವಸತಿ ನಿಲಯದ ಸೈಕ್ಲಿಂಗ್ ಕ್ರೀಡಾಪಟು ಪ್ರೀತಿ ಹಳಬರ ಬೆಳ್ಳಿ ಪದಕ ಗೆದ್ದಿದ್ದಾರೆ.

ಕ್ರೀಡಾಪಟು ಪ್ರೀತಿ ಹಳಬರ ಇವರಿಗೆ ಯಲ್ಲಪ್ಪ ಹಿರೇಕುರುಬರ ತರಬೇತಿಯನ್ನು ನೀಡಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಬಿ. ಶ್ರೀನಿವಾಸ್, ಬೆಳಗಾವಿ ಜಿಲ್ಲಾ ಸೈಕ್ಲಿಂಗ್ ಸಂಸ್ಥೆಯ ಕಾರ್ಯದರ್ಶಿಗಳಾದ ಆರ್.ಎಚ್. ಪೂಜಾರಿ ಹಾಗೂ ಸಿಬ್ಬಂದಿ ವರ್ಗದವರು ಸೇರಿ ಶುಭ ಹಾರೈಸಿದರು ಎಂದು ಯುವ ಸಬಲೀಕರಣ ಮತ್ತುಕ್ರೀಡಾ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button