
ಪ್ರಗತಿವಾಹಿನಿ ಸುದ್ದಿ: ಇಂದಿನಿಂದ 18 ದಿನಗಳ ಕಾಲ ಶಾಲಾ ಮಕ್ಕಳಿಗೆ ದಸರಾ ರಜೆಯನ್ನ ಘೋಷಣೆ ಮಾಡಿದೆ.
ಮೈಸೂರು ದಸರಾ ಹಬ್ಬದ ತಯಾರಿ ಭರ್ಜರಿ ಆಗಿದೆ. ಇದಕ್ಕಾಗಿ ಮೈಸೂರು ಮಾತ್ರವಲ್ಲದೇ ರಾಜ್ಯದಲ್ಲಿ ಸಹ ತಯಾರಿ ಆರಂಭವಾಗಿದೆ. ಈ ದಸರಾ ಹಬ್ಬವನ್ನ ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಇದೀಗ ರಾಜ್ಯ ಶಿಕ್ಷಣ ಇಲಾಖೆ 18 ದಿನಗಳ ದಸರಾ ರಜೆಯನ್ನ ಘೋಷಣೆ ಮಾಡಿದೆ.
ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ಈ ರಜೆ ಘೋಷಣೆ ಮಾಡಿದ್ದು, ಕುಟುಂಬದ ಜೊತೆ ಸಮಯ ಕಳೆಯಲು ಇದು ಉತ್ತಮ ಅವಕಾಶವಾಗಿದೆ. 18 ದಿನಗಳ ರಜೆಯಲ್ಲಿ ಪ್ರಮುಖ ದಿನಗಳನ್ನು ಬಿಡಲಾಗಿದೆ.
ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಇರುವ ಕಾರಣದಿಂದ ಅವುಗಳನ್ನ ಬಿಟ್ಟು ಈ 18 ದಿನಗಳ ರಜೆಯನ್ನ ಘೋಷಣೆ ಮಾಡಲಾಗಿದೆ. ಆ ದಿನ ಮಕ್ಕಳಿಗೆ ಶಾಲೆಗಳಿಗೆ ಬರಬೇಕು ಎಂದು ಆದೇಶ ನೀಡಲಾಗಿದೆ.