Kannada NewsNationalTravel

*ಎಐ ಎಫೆಕ್ಟ್: 11 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆದು ಹಾಕಿದ ಕಂಪನಿ*

ಪ್ರಗತಿವಾಹಿನಿ ಸುದ್ದಿ: ಅಕ್ಸೆಂಚರ್ ಕಂಪನಿಯ ಆದಾಯ ಏರಿಕೆಯಾಗಿದ್ದರೂ ಕಾರ್ಪೊರೇಟ್ ಬೇಡಿಕೆ ಕಡಿಮೆ ಆಗಿರುವುದು ಮತ್ತು ಎಐ ಟೆಕ್ನಾಲಜಿ ಅಳವಡಿಕೆ ಹೆಚ್ಚುತ್ತಿರುವ ಕಾರಣ ತನ್ನ 11,000ಕ್ಕೂ ಅಧಿಕ ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. 

ವಿಶ್ವಾದ್ಯಂತ ಇರುವ ತನ್ನ ವಿವಿಧ ಕಚೇರಿಗಳಲ್ಲಿನ ಉದ್ಯೋಗಿಗಳನ್ನು ಕಳೆದ ಮೂರು ತಿಂಗಳಿಂದ ಕೆಲಸದಿಂದ ತೆಗೆದುಹಾಕಿರುವುದು ವರದಿಯಾಗಿದೆ.

ಈ ಲೇ ಆಫ್‌ನಿಂದ ಅಕ್ಸೆಂಚರ್ ಕಂಪನಿಗೆ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚಿನ ಹಣ ಉಳಿತಾಯವಾಗುವ ನಿರೀಕ್ಷೆ ಇದೆ. ಇದೇ ವೇಳೆ, ಎಐ ಕೇಂದ್ರಿತ ಪ್ರಾಜೆಕ್ಟ್‌ಗಳನ್ನು ಸಮರ್ಥವಾಗಿ ನಿಭಾಯಿಸಬಲ್ಲ ಪ್ರತಿಭೆಗಳನ್ನು ಉಳಿಸಿಕೊಳ್ಳಲೂ ಅಕ್ಸೆಂಚರ್ ಪ್ರಯತ್ನಿಸುತ್ತಿದೆ.

Home add -Advt

Related Articles

Back to top button