*ಬೆಡ್ ರೂಮ್ ನಲ್ಲಿ ಸಿಕ್ರೇಟ್ ಕ್ಯಾಮರಾ ಫಿಕ್ಸ್ ಮಾಡಿ ಪತ್ನಿಯೊಂದಿಗಿನ ವಿಡಿಯೋ ರೆಕಾರ್ಡ್: ಸ್ನೇಹಿತರಿಗೂ ಕಳಿಹಿಸಿ ಪತ್ನಿಗೆ ಬ್ಲ್ಯಾಕ್ ಮೇಲ್*

ಸೈಕೋ ಪತಿ ವಿರುದ್ಧ ದೂರು ನೀಡಿದ ಪತ್ನಿ
ಪ್ರಗತಿವಾಹಿನಿ ಸುದ್ದಿ: ಪತ್ನಿಯೊಂದಿಗಿನ ಖಾಸಗಿ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಪತಿ ಮಹಾಶಯನೊಬ್ಬ ಅದನ್ನು ತನ್ನ ಸ್ನೇಹಿತರಿಗೆ ಹಂಚಿ, ಅವರೊಂದಿಗೂ ಸೆಕ್ಸ್ ನಡೆಸುವಂತೆ ಒತ್ತಾಯಿಸುತ್ತಿದ್ದ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೈಕೋಪಾತ್ ಪತಿಯ ಕಾಟಕ್ಕೆ ಬೇಸತ್ತ ಪತ್ನಿ, ಪತಿ ವಿರುದ್ಧ ದೂರು ನೀಡಿದ್ದಾರೆ. ಬೆಂಗಳೂರಿನ ಪುಟ್ಟೇನಹಳ್ಳಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೈಯದ್ ಇನಾಮುಲ್ ಎಂಬಾತ ಬೆಡ್ ರೂಮ್ ನಲ್ಲಿ ಸಿಕ್ರೇಟ್ ಕ್ಯಾಮರಾ ಫಿಕ್ಸ್ ಮಾಡಿ ಪತ್ನಿಯೊಂದಿಗಿನ ಲೈಂಗಿಕ ಕ್ರಿಯೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಲ್ಲದೇ ವಿಡಿಯೋ ಇಟ್ಟುಕೊಂಡು ಪತ್ನಿಗೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.
ದುಬೈನಲ್ಲಿರುವ ತನ್ನ ಸ್ನೇಹಿತರಿಗೆ ಹಾಗೂ ಬೆಂಗಳೂರಿನಲ್ಲಿರುವ ಇತರ ಸ್ನೇಹಿತರಿಗೂ ಪತ್ನಿಯ ಖಾಸಗಿ ವಿಡಿಯೋ, ಫೋಟೋ ಕಳುಹಿಸಿ ವಿಕೃತಿ ಮೆರೆಯುತ್ತಿದ್ದ. ಅಲ್ಲದೇ ತನ್ನ ಸ್ನೇಹಿತರೊಂದಿಗೂ ಮಲಗುವಂತೆ ಪತ್ನಿ ಒತ್ತಾಯಿಸುತ್ತಿದ್ದ. ಆತನ ಸ್ನೇಹಿತರೂ ಮಹಿಳೆಗೆ ಕಿರುಕುಳ ನೀಡಲಾರಂಭಿಸಿದ್ದರು. ನೊಂದ ಮಹಿಳೆ ಪತಿಯ ವಿರುದ್ಧ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಸೈಯದ್ ಇನಾಮುಲ್ ಅದಾಗಲೇ ಒಂದು ಮದುವೆಯಾಗಿ ವಿಷಯ ಮುಚ್ಚಿಟ್ಟು ಮದುವೆಯಾಗಿದ್ದಾಗಿಯೂ ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ ಸೈಯದ್ ತನಗೆ 19 ಮಹಿಳೆಯರೊಂದಿಗೆ ಸಂಬಂಧವಿರುವುದಾಗಿಯೂ ಹೇಳುತ್ತಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ.