Kannada NewsKarnataka NewsLatestPolitics

*ಸಮೀಕ್ಷೆ ಅವಧಿ ವಿಸ್ತರ್ಣೆ: ಶಿಕ್ಷಕರಿಗೆ ಡಬಲ್ ಕೆಲಸ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಈ ಹಿಂದೆ ನಿಗದಿ ಮಾಡಿದ್ದ ಗಡುವು ಇಂದು ಮುಕ್ತಾಯವಾಗಿದೆ. ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಇನ್ನೂ ಐದು ದಿನ ವಿಸ್ತರಿಸಲಾಗಿದೆ. 

ಇಂದಿನಿಂದ ಅಕ್ಟೋಬರ್ 12 ರವರೆಗೆ ಸಮೀಕ್ಷೆ ಅವಧಿಯನ್ನು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. 

ಅಕ್ಟೋಬರ್ 12 ರವರೆಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಕ್ಷಕರಿಗೆ ಶಾಲೆ ಕೆಲಸ. ನಂತರ ಸಮೀಕ್ಷೆಯಲ್ಲಿ ಭಾಗವಹಿಸಲು ಸೂಚನೆ ನೀಡಲಾಗಿದೆ.

ಅಕ್ಟೋಬರ್ 6ರವರೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊರತುಪಡಿಸಿ 1.15 ಕೋಟಿ ಕುಟುಂಬಗಳ ಅಂದರೆ ಶೇಕಡ 80.39ರಷ್ಟು ಗಣತಿ ಪೂರ್ಣವಾಗಿದೆ.

Home add -Advt

Related Articles

Back to top button