
ಪ್ರಗತಿವಾಹಿನಿ ಸುದ್ದಿ: ಬಿಗ್‌ಬಾಸ್ ಶೋ ನಡೆಯುತ್ತಿದ್ದ ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿಯಲಾಗಿತ್ತು. ವಿವಿಧ ಕಾಯಿದೆಯಡಿ ಅನುಮತಿ ಪಡೆಯದ ಹಿನ್ನೆಲೆ ಮಾಲಿನ್ಯ ಇಲಾಖೆ ನೋಟಿಸ್ ನೀಡಿ, ತಾಲ್ಲೂಕು ಆಡಳಿತ ಬೀಗ ಹಾಕಿ ಶೋ ಬಂದ್ ಮಾಡಲಾಗಿತ್ತು. ಆದರೆ ಇಂದಿನಿಂದ ಶೋ ಮತ್ತೆ ಆರಂಭವಾಗಲಿದೆ
ಬಿಗ್ ಬಾಸ್ ಗೆ ರಿಲೀಫ್ ಸಿಕ್ಕಿದ್ದು ಜಾಲಿವುಡ್ ಸ್ಟುಡಿಯೋಸ್ ನಲ್ಲಿ ಇಂದಿನಿಂದಲೇ ಶೂಟಿಂಗ್ ಗೆ ಸಿದ್ಧತೆ ಆರಂಭ ಆಗಿದೆ. ಈಗಾಗಲೇ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ವಾಪಸ್ ಕರೆತರಲಾಗಿದೆ.
ಮೊನ್ನೆ ಎಲ್ಲಾ ಸ್ಪರ್ಧೆಗಳನ್ನು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿತ್ತು. ನಿನ್ನೆ ಡಿಸಿಎಂ ಡಿಕೆಶಿ ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡುವಂತೆ ಸೂಚಿಸಿದ ಬೆನ್ನಲ್ಲೇ ಇವತ್ತು ಎಲ್ಲರನ್ನೂ ವಾಪಸ್ ಬಿಗ್ ಬಾಸ್ ಮನೆಗೆ ಶಿಫ್ಟ್ ಮಾಡಲಾಗಿದೆ. ಇವತ್ತು ಸಂಜೆ ವೇಳೆಗೆ ಶೋ ಶೂಟಿಂಗ್ ಮತ್ತೆ ಆರಂಭವಾಗಲಿದೆ ಎನ್ನಲಾಗುತ್ತಿದೆ.
ಇನ್ನು ಕಲರ್ಸ್ ಕನ್ನಡ ವಾಹಿನಿಯ ಸೋಷಿಯಲ್ ಮೀಡಿಯಾ ದಲ್ಲಿ ಬಿಗ್ ಬಾಸ್ ಮನೆಯ ಲೈಟ್ ಆನ್ ಆಗುವ ವಿಡಿಯೋ ಕೂಡ ರಿಲೀಸ್ ಆಗಿದ್ದು, ಬಿಗ್ ಬಾಸ್ ಎಂದಿನಂತೆ ಅದೇ ಸಮಯದಲ್ಲಿ ಪ್ರಸಾರ ಎಂಬ ಹಿಂಟ್ ನೀಡಿದೆ.