Kannada NewsKarnataka NewsPolitics

*ಹೊಸ ರೇಷನ್ ಕಾರ್ಡ್‌ಗಳ ಬಗ್ಗೆ ಮಾಹಿತಿ ನೀಡಿದ ಆಹಾರ ಸಚಿವ ಮುನಿಯಪ್ಪ*

ಪ್ರಗತಿವಾಹಿನಿ ಸುದ್ದಿ: ಹೊಸ ರೇಷನ್ ಕಾರ್ಡ್‌ಗಳನ್ನ ಶೀಘ್ರದಲ್ಲಿ ಕೊಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ  ಭರವಸೆ ಕೊಟ್ಟಿದ್ದಾರೆ.

ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಯಾರಿಗೆಲ್ಲಾ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲವೋ ಅವರನ್ನ ಎಪಿಎಲ್ ಪಟ್ಟಿಗೆ ಸೇರಿಸುವ ಕೆಲಸ ನಡೆಯುತ್ತಿದೆ. ಅರ್ಹತೆ ಇರುವ ಎಲ್ಲರಿಗೂ ಬಿಪಿಎಲ್ ಕಾರ್ಡ್‌ಗಳನ್ನು ಕೊಡಲಾಗುತ್ತದೆ ಎಂದು ಹೇಳಿದ್ದಾರೆ. 

ರಾಜ್ಯದಲ್ಲಿ ಸುಮಾರು 1.28 ಕೋಟಿ ಬಿಪಿಎಲ್ ಕಾರ್ಡ್ ಗಳು ಇದೆ. ಈ ಕಾರ್ಡ್‌ಗಳಲ್ಲಿ ಸುಮಾರು 4.50 ಕೋಟಿ ಜನರು ಫಲಾನುಭವಿಗಳಿದ್ದಾರೆ. ಸದ್ಯ ನಾವು ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಮಾಡುತ್ತಿದ್ದೇವೆ. ಯಾರೆಲ್ಲಾ ಬಿಪಿಎಲ್ ಕಾರ್ಡ್ ಪಡೆಯಲು ಅನರ್ಹರಿದ್ದಾರೋ ಅವರನ್ನ ಬಿಪಿಎಲ್‌ನಿಂದ ಎಪಿಎಲ್‌ಗೆ ಹಾಕುತ್ತೇವೆ ಎಷ್ಟೇ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ಎರಡೂ ವರ್ಷಗಳಿಂದ ಯಾವುದೇ ಹೊಸ ಬಿಪಿಎಲ್ ಕಾರ್ಡ್‌ಗಳನ್ನ ಕೊಡಲಾಗುತ್ತಿಲ್ಲ. 2023ರ ನಂತರ ಯಾವುದೇ ಹೊಸ ಅರ್ಜಿಗಳನ್ನ ಸ್ವೀಕರಿಸಿಲ್ಲ. ಆದರೆ ಕೇವಲ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು, ಹೊಸ ಸದಸ್ಯರನ್ನ ಸೇರಿಸಲು ಹಾಗೆಯೇ, ಸದಸ್ಯರನ್ನ ಹೊರಗೆ ಹಾಕಲು ಸೇರಿದಂತೆ ಯಜಮಾನನ ಹೆಸರು ಬದಲಾವಣೆ, ಬಿಪಿಎಲ್‌ನಿಂದ ಬಿಪಿಎಲ್‌ಗೆ ಹಾಗೂ ಎಪಿಎಲ್‌ನಿಂದ ಬಿಪಿಎಲ್‌ಗೆ ಬದಲಾವಣೆ ಮಾಡಲು ಅವಕಾಶಗಳನ್ನ ಕೊಡಲಾಗಿತ್ತು. 

Home add -Advt

Related Articles

Back to top button