*ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಕೊನೇ ಕ್ಷಣದಲ್ಲಿ ನಾಮಪತ್ರ ಹಿಂಪಡೆದ ಅಶೋಕ್ ಪಟ್ಟಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯದಿನವಾಗಿತ್ತು. ಕೊನೆಯ ಕ್ಷಣದಲ್ಲಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ನಾಮಪತ್ರ ವಾಪಸ್ ಪಡೆದುಕೊಂಡರು.
ರಾಮದುರ್ಗ ತಾಲೂಕಿನಿಂದ ನಾಮಪತ್ರ ಸಲ್ಲಿಸಿದ್ದ ಅಶೋಕ ಪಟ್ಟಣ ಅವರು, ತಮ್ಮ ಬೆಂಬಲಿಗರ ಜೊತೆ ಆಗಮಿಸಿ ನಾನಪತ್ರ ವಾಪಸ್ ಪಡೆದರು.
ರಾಮದುರ್ಗದಿಂದ ಬಾಲಚಂದ್ರ ಜಾರಕಿಹೊಳಿ ಬಣದಿಂದ ಶ್ರೀಕಾಂತ ಡವನ ನಾಮಪತ್ರ ಸಲ್ಲಿಕೆ ಮಾಡಿದ್ದು, ಮಲ್ಲಣ್ಣ ಯಾದವಾಡ ಕೂಡ ಅವರ ವಿರುದ್ಧ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಶೋಕ ಪಟ್ಟಣ ನಾಮಪತ್ರ ವಾಪಸ್ ಪಡೆದಿರುವುದರಿಂದ ಶ್ರೀಕಾಂತ ಡವನ ಹಾಗೂ ಮಲ್ಲಣ್ಣ ಯಾದವಾಡ ನಡುವೆ ನೇರ ಪೈಟ್ ಏರ್ಪಟ್ಟಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ ಪಟ್ಟಣ ಅವರು, ಕಾರಣಾಂತರದಿಂದ ನಾಮಪತ್ರ ಹಿಂದಕ್ಕೆ ತಗೆದುಕೊಂಡಿದ್ದೇನೆ. ಮುಂದೆ ಮಂತ್ರಿ ಸ್ಥಾನ ಸಿಗುವ ಸಾದ್ಯತೆ ಇದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋತರೆ ಮಂತ್ರಿ ಸ್ಥಾನಕ್ಕೆ ಅಡ್ಡಿ ಆಗಬಹುದು. ಸಚಿವ ಸಂಪುಟ ವಿಸ್ತರಣೆ ಆದರೆ ನನಗೂ ಸ್ಥಾನ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.