*ಪ್ರೇಯಸಿಯೊಂದಿಗೆ ಲಾಡ್ಜ್ ಗೆ ಬಂದಿದ್ದ ಯುವಕ ನಿಗೂಢವಾಗಿ ಸಾವು; ರೂಮಿನಲ್ಲೇ ಶವವಾಗಿ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಪುತ್ತೂರು ಮೂಲದ ಯುವಕನೊಬ್ಬ ಬೆಂಗಳೂರಿನ ಲಾಡ್ಜ್ ವೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
20 ವರ್ಷದ ತಕ್ಷಿತ್ ಮೃತ ಯುವಕ. ಬೆಂಗಳೂರ್ನ ಮಡಿವಾಳ ಬಳಿಯ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ ನಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಅಕ್ಟೋಬರ್ ೯ರಂದು ಯುವಕ ತನ್ನ ಪ್ರೇಯಸಿಯೊಂದಿಗೆ ಲಾಡ್ಜ್ ಗೆ ಬಂದಿದ್ದ. ಇಬ್ಬರೂ ಕಳೆದ ೮ ದಿನಗಳಿಂದ ಲಾಡ್ಜ್ ನಲ್ಲಿ ವಾಸವಾಗಿದ್ದರು. ಆಗಾಗ ಹೊರ ಹೋಗಿ ಬರುತ್ತಿದ್ದರು. ಊಟ, ತಿಂಡಿಗಳನ್ನು ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿಕೊಂಡು ತರಿಸಿಕೊಳ್ಳುತ್ತಿದ್ದರು.
ಎರಡು ದಿನಗಳಿಂದ ಯುವಕ-ಯುವತಿ ರೂಮ್ ನಿಂದ ಹೊರ ಹೋಗಿಲ್ಲ. ಇಂದು ಬೆಳಿಗ್ಗೆ ಯುವಕ ಲಾಡ್ಜ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಆತನ ಜೊತೆ ಬಂದಿದ್ದ ಯುವತಿ ಸುಳಿವಿಲ್ಲ. ಘಟನೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ತತ್ವಿಕ್ ಹಾಗೂ ಯುವತಿ ಅಕ್ಟೋಬರ್ 9ರಂದು ಲಾಡ್ಜ್ ಗೆ ಬಂದಿರುವ ಹಾಗೂ ಹೊರ ಹೋಗಿ ಮತ್ತೆ ಲಾಡ್ಜ್ ಗೆ ವಾಪಸ್ ಆಗಿರುವ ದೃಶ್ಯಗಳು ಸಿಸಿಕ್ಯಾಮರಾದಲ್ಲಿ ಸೆರೆಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವಕನ ನಿಗೂಢ ಸಾವಿನ ಬಗ್ಗೆ ತನಿಖೆ ನಡೆಸಿದ್ದಾರೆ.