
ಪ್ರಗತಿವಾಹಿನಿ ಸುದ್ದಿ: ಸಂಸತ್ ಬಳಿಯ ಸಂಸದರ ವಸತಿ ನಿಲಯದಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ನವದೆಹಲಿಯ BD ಮಾರ್ಗದ ಬಹುಮಹಡಿ ಬ್ರಹ್ಮಪುರ ಅಪಾರ್ಟ್ ಮೆಂಟ್ ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಈ ಅಪಾರ್ಟ್ ಮೆಂಟ್ ಸಂಸತ್ ಸದಸ್ಯರುಗೆ ನೀಡಿದ ಅಧಿಕೃತ ವಸತಿ ನಿಲಯಗಳಲ್ಲಿ ಒಂದಾಗಿದೆ. ಈ ಕಟ್ಟಡದಲ್ಲಿ ಹಲವಾರು ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು ವಾಸವಾಗಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಅಪಾರ್ಟ್ ಮೆಂಟ್ ನ ಮೇಲ್ಮಹಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಹೊತ್ತಲ್ಲ ಕಟ್ಟಡದ ಇತರ ಭಾಗಗಳಿಗೂ ವ್ಯಾಪಿಸಿದೆ. ಬೆಂಕಿ ಅವಘಡ ಸಂಭವಿಸಿ ಅರ್ಧಗಂಟೆಯಾದರೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿರಲಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.