
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಜಯ ಕರ್ನಾಟಕ ಪತ್ರಿಕೆಯ ಚಿಕ್ಕೋಡಿ ವರದಿಗಾರ ವಿರೂಪಾಕ್ಷಿ ಕವಟಗಿ ನಿಧನರಾಗಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.
ಒಂದು ತಿಂಗಳ ಹಿಂದೆ ಗುರ್ಲಾಪುರ ಕ್ರಾಸ್ ಬಳಿ ಟಾಟಾ ಏಸ್ ಮತ್ತು ದ್ವಿ ಚಕ್ರ ವಾಹನಗಳ ನಡುವೆ ಅಪಘಾತದಲ್ಲಿ ಕವಟಗಿ ಗಂಭೀರವಾಗಿ ಗಾಯಗೊಂಡಿದ್ದರು. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಸಂಜೆ ಆರೋಗ್ಯ ಪರಿಸ್ಥಿತಿ ಗಂಭೀರವಾಗಿ ರಾತ್ರಿ 8.30ರ ಹೊತ್ತಿಗೆ ಕೊನೆಯುಸಿರೆಳೆದರು.
ಅವರಿಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರರಿದ್ದಾರೆ. ಗುರುವಾರ ಉಮ್ರಾಣಿಯ ತೋಟದ ಮನೆಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ನಿರ್ದೇಶಕ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವರು ಕವಟಗಿ ನಿಧನಕ್ಕೆ ಸಂತಾಪ ವಯಕ್ತಪಡಿಸಿದ್ದಾರೆ.