
ಪ್ರಗತಿವಾಹಿನಿ ಸುದ್ದಿ: ಪತಿಯ ಕಿರುಕುಳದಿಂದ ಬೇಸತ್ತು 3 ವರ್ಷದ ಮಗನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚೆನ್ನಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ.
ತಾಯಿ ಫಾತಿಮಾ(21) ಮತ್ತು ಪುತ್ರ ಅಬ್ದುಲ್ (3) ಮೃತರು. ಮಗಳ ಸಾವಿಗೆ ಪತಿ ಮಸ್ತಾನ್ ಸಾಬ್ ಕಿರುಕುಳವೇ ಕಾರಣ ಎಂದು ಫಾತಿಮಾ ಪೋಷಕರು ಆರೋಪಿಸಿದ್ದಾರೆ. ಬದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
8 ವರ್ಷದ ಹಿಂದೆ ಜಮೇಲಾ ಎಂಬ ಯುವತಿಯೊಂದಿಗೆ ಮಸ್ತಾನ್ ಸಾಬ್ ಮದುವೆ ಆಗಿದ್ದ. 5 ತಿಂಗಳ ಗರ್ಭಿಣಿಯಾಗಿದ್ದ ಫಾತಿಮಾಳನ್ನು ಪ್ರೀತಿಸಿ ವಿವಾಹವಾಗಿದ್ದ.
ಇತ್ತೀಚೆಗೆ ಫಾತಿಮಾಳಿಗೆ ಪತಿ ಮಸ್ತಾನ್ ಸಾಬ್ ಹೆಚ್ಚು ಕಿರುಕುಳ ನೀಡುತ್ತಿದ್ದ ಆರೋಪ ಕೂಡ ಕೇಳಿಬಂದಿದೆ. ಪತಿ ಕಿರುಕುಳದಿಂದ ಬೇಸತ್ತು ಮೂರು ದಿನ ಹಿಂದೆ ಫಾತಿಮಾ ತವರಿಗೆ ಬಂದಿದ್ದಳು. ಮಗಳು ಫಾತಿಮಾ ಸಾವಿಗೆ ಪತಿ ಕಿರುಕುಳವೇ ಕಾರಣ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ