Kannada NewsKarnataka NewsLatest
*ಐತಿಹಾಸಿಕ ಹಾಸನಾಂಬೆ ದರ್ಶನ ಸಂಪನ್ನ: ಮತ್ತೆ ದೇವರ ದರ್ಶನಕ್ಕೆ ಒಂದು ವರ್ಷ ಕಾಯಲೇಬೇಕು; ಮುಂದಿನ ವರ್ಷ ದೇವಿ ದರ್ಶನದ ಮುಹೂರ್ತ ಪಿಕ್ಸ್*

ಪ್ರಗತಿವಾಹಿನಿ ಸುದ್ದಿ: ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಿ ದರ್ಶನ ಈ ವರ್ಷ ಸಂಪನ್ನವಾಗಿದೆ. ಹಾಸನಾಂಬೆ ದೇವಸ್ಥಾನದ ಗರ್ಭಗುಡಿ ಬಾಗಿಲು ಇಂದು ಮಧ್ಯಾಹ್ನ ಬಂದ್ ಆಗಿದೆ.
ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ದೇವಾಲಯದಲ್ಲಿ ದೀಪಗಳನ್ನು ಇಟ್ಟು ಅಂತಿಮ ಪೂಜೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಸಮ್ಮುಖದಲ್ಲಿ ಗರ್ಭಗುಡಿಗೆ ಅರ್ಚಕರು ಬೀಗ ಹಾಕಿದರು. ದೇವಸ್ಥಾನದ ಒಳಗಡೆ ಈ ವರ್ಷ ಹಚ್ಚಿದ ದೀಪ ಮುಂದಿನ ವರ್ಷ ದೇವಾಲಯದ ಬಾಗಿಲು ತೆರೆಯುವವರೆಗೂ ಉರಿಯುತ್ತಿರುತ್ತದೆ. ದೇವರಿಗೆ ಏರಿಸಿದ ಹೂಗಳು ಕೂಡ ಬಾಡುವುದಿಲ್ಲ ಎಂಬುದು ವಿಶೇಷ.
ಹಾಸನಾಂಬೆ ದೇವಸ್ಥಾನದ ಬಾಗಿಲು ಬಂದ್ ಆಗಿದ್ದು, ಈ ಮೂಲಕ 15 ದಿನಗಳ ಕಾಲ ನಡೆದ ಹಾಸನಾಂಬೆ ಜಾತ್ರಾ ಮಹೋತ್ಸವ ಸಂಪನ್ನವಾಗಿದೆ. ಇನ್ನು ಹಾಸನಾಂಬೆ ದರ್ಶನ ಪಡೆಯಬೇಕೆಂದರೆ ಭಕ್ತರು ಮುಂದಿನ ವರ್ಷದವರೆಗೆ ಕಾಯಲೇಬೇಕು. ಮುಂದಿನ ವರ್ಷ 29-10-2026ರಿಂದ 11-11-2026 ರವರೆಗೆ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲಿದೆ.