Kannada NewsKarnataka NewsLatest

*ಓಯೋ ರೂಮಿಗೆ ಕರೆದೊಯ್ದು ಅತ್ಯಾಚಾರ ಪ್ರಕರಣ: ಹೈಕೋರ್ಟ್ ಮಹತ್ವದ ತೀರ್ಪು*

ಪ್ರಗತಿವಾಹಿನಿ ಸುದ್ದಿ: ಡೇಟಿಂಗ್ ಆಪ್ ಮೂಲಕ ಪರಿಚಯನಾಗಿದ್ದ ಯುವಕ ಮಹಿಳೆಯನ್ನು ಓಯೋ ರೂಮ್ ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದ ಆರೋಪ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ಪೀಠ, ಮಹಿಳ ದಾಖಲಿಸಿದ್ದ ಎಫ್ ಐ ಆರ್ ರದ್ದುಗೊಳಿಸ್ದೆ. ಯುವಕ ಸಾಂಪ್ರಸ್ ಅಂಥೋಣಿ ವಿರುದ್ಧರ ಕೇಸ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಡೇಟಿಂಗ್ ಆಪ್ ಮೂಲಕ ಪರಿಚಯನಾಗಿದ್ದ ಸಾಂಪ್ರಸ್ ಅಂಥೋಣಿ , ತನ್ನನ್ನು ಓಯೋ ರೂಮ್ ಗೆ ಕರೆದೊಯ್ದು ಬಲವಂತದ ಲೈಂಗಿಕಕ್ರಿಯೆ ನಡೆಸಿ, ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿ ಮಹಿಳೆಯೊಬ್ಬರು ದೂರು ನೀಡಿದ್ದರು. ಮಹಿಳೆ ಹಾಗೂ ಯುವಕನ ನಡುವೆ ಒಪ್ಪಿಗೆಯಿಂದ ಆರಂಭವಾದ ಸಂಬಂಧ ನಿರಾಸೆಯಲ್ಲಿ ಕೊನೆಗೊಂಡಿದೆ ಎಂದು ತಿಳಿಸಿದೆ.

ಮಹಿಳೆ ಹಾಗೂ ಯುವಕ ಡೇಟಿಂಗ್ ಆಪ್ ನಲ್ಲಿ ಪರಿಚಯವಾಗಿ ಒಂದು ವರ್ಷದಿಂದ ಸಂಪರ್ಕದಲ್ಲಿದ್ದರು. ಇಬ್ಬರೂ ಭೇಟಿಯಾಗಿ ರೆಸ್ಟೋರೆಂಟ್ ನಲ್ಲಿ ಊಟ ಮಾಡಿ ಬಳಿಕ ಇಬ್ಬರೂ ಓಯೋ ರೂಮ್ ಗೆ ಹೋಗಿದ್ದರು. ಯುವಕ ಲೈಂಗಿಕ ಕ್ರಿಯೆಗೆ ಮುಂದಾದಾಗ ಮಹಿಳೆ ನಿರಾಕರಿಸಿದ್ದರು. ನಿರಾಕರಿಸಿದ ಬಳಿಕವೂ ಯುವಕ ಲೈಂಗಿಕಕ್ರಿಯೆ ನಡೆಸಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಮರುದಿನ ಬೆಳಿಗ್ಗೆ ಅಪಾರ್ಟ್ ಮೆಂಟ್ ಗೆ ಡ್ರಾಪ್ ಮಾಡಿ ಹೋಗಿದ್ದಾನೆ. ಅದೇ ದಿನ ವೈದ್ಯಕೀಯ ಪರೀಕ್ಷೆ ನಡೆಸಿದ್ದ ಮಹಿಳೆ ಬಳಿಕ ಪೊಲೀಸರಿಗೆ ದೂರು ನೀಡಿದ್ದರು.

Home add -Advt

ತನಿಖೆ ವೇಳೆ ಪೊಲೀಸರು ಯುವಕ ಹಾಗೂ ಮಹಿಳೆಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಇಬ್ಬರೂ ಕೆಟ್ಟ ಅಭಿರುಚಿಯ ಚಾಟಿಂಗ್ ನಲ್ಲಿ ತೊಡಗಿರುವುದು ಹಾಗೂ ಪರಸ್ಪರ ಫೋಟೋ, ವಿಡಿಯೋ ವಿನಿಮಯ ಮಾಡಿಕೊಂಡಿರುವುದು ಬಯಲಾಗಿದೆ. ಇವುಗಳನ್ನು ಪರಿಶೀಲಿಸಿ ಮಹಿಳೆಯ ದೂರು ಸುಳ್ಳು ಎಂದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಹೈಕೋರ್ಟ್ ಪರಸ್ಪರ ಒಪ್ಪಿತ ಸಂಬಂಧದ ಲೈಂಗಿಕ ಕ್ರಿಯೆ ಅಪರಾಧವಲ್ಲ, ಈ ಪ್ರಕರಣದಲ್ಲಿ ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Related Articles

Back to top button