Kannada NewsLatestNational

*ಯುಪಿಎಸ್ಸಿ ಆಕಾಂಕ್ಷಿ ರಾಮಕೇಶ್ ಮೀನಾ ಸಾವಿಗೆ ಬಿಗ್ ಟ್ವಿಸ್ಟ್*

ಪ್ರಗತಿವಾಹಿನಿ ಸುದ್ದಿ: ಎಸಿ ಸ್ಫೋಟದಿಂದ 35 ವರ್ಷದ ಯುಪಿಎಸ್ಸಿ ಆಕಾಂಕ್ಷಿ ರಾಮಕೇಶ್ ಮೀನಾ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಟ್ ಸಿಕ್ಕಿದೆ.‌

 ಅ. 6ರಂದು ದೆಹಲಿಯ  ಗಾಂಧಿ ವಿಹಾರ್ ಬಿಲ್ಡಿಂಗ್‌ನ ಫ್ಲಾಟ್‌ನಲ್ಲಿ  ಸಂಭವಿಸಿದ್ದ ಬೆಂಕಿ ಅವಘಡಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಬಗ್ಗೆ ಅನುಮಾನಗಳು ಇದ್ದ ಕಾತಣ ತನಿಖೆ ಕೈಗೊಂಡ ಪೊಲೀಸರು ಸತ್ಯ ಬಯಲಿಗೆಳೆದಿದ್ದು, ಇದೊಂದು ಆಕಸ್ಮಿಕ ಅಗ್ನಿ ಅವಘಡವಲ್ಲ ಬದಲಿಗೆ ಕೊಲೆ ಎಂಬುದು ದೃಢಪಟ್ಟಿದೆ. 

ಈ ಪ್ರಕರಣದ ಮಾಸ್ಟರ್ ಮೈಂಡ್ 21 ವರ್ಷದ ವಿದ್ಯಾರ್ಥಿನಿ ಅಮೃತಾ ಎಂಬ ಸ್ಫೋಟಕ ಸತ್ಯವನ್ನು ಪೊಲೀಸರು ತನಿಖೆಯಲ್ಲಿ ಬಯಲಿಗೆಳೆದಿದ್ದಾರೆ. ಮೃತ ರಾಮಕೇಶ್ ಮೀನಾ ಮತ್ತು ಅಮೃತ ಲಿವ್ ಇನ್ ನಲ್ಲಿದ್ದರು ಎನ್ನಲಾಗಿದೆ.

ಮೃತ ರಾಮಕೇಶ್ ಅಮೃತ ಖಾಸಗಿ ವಿಡಿಯೋವನ್ನ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ತನ್ನ ವಿಡಿಯೋಗಳನ್ನ ಡಿಲೀಟ್ ಮಾಡುವಂತೆ ಅಮೃತ ಬೇಡಿಕೊಂಡರೂ ಆತ ನಿರಾಕರಿಸಿದ್ದ ಹೀಗಾಗಿ ಅಮೃತಾ ಗ್ಯಾಸ್‌ ಏಜೆನ್ಸಿ ಹೊಂದಿದ್ದ ತನ್ನ ಮಾಜಿ ಪ್ರಿಯಕರನಿಗೆ ಈ ವಿಷಯ ತಿಳಿಸಿದ್ದಳು. ಆ ಬಳಿಕ ಇಬ್ಬರು ಒಟ್ಟಾಗಿ ಸಂಚು ರೂಪಿಸಿ ಈ ಕೊಲೆ ಮಾಡಿದ್ದಾರೆ.

Home add -Advt

ಮೀನಾ ಕೊಲೆಗೆ ಸ್ಕೆಚ್ ಹಾಕಿದ್ದ ಆರೋಪಿಗಳು ಅಕ್ಟೋಬರ್ 6ರ ಮುಂಜಾನೆ ಮೀನಾನನ್ನ ಕತ್ತು ಹಿಸುಕಿ ಕೊಲೆ ಮಾಡಿದ್ರು. ಆ ಬಳಿಕ ಆತನ ಹಾರ್ಡ್ ಡಿಸ್ಕ್ ಲ್ಯಾಪ್‌ಟಾಪ್ ಎಲ್ಲವನ್ನೂ ಎತ್ತಿಟ್ಟುಕೊಂಡು ಸಾಕ್ಷಿ ಸಿಗದಂತೆ ಮಾಡಿ ಆತನ ದೇಹವನ್ನು ಸುಟ್ಟಿದ್ದಾರೆ. ಆ ಬಳಿಕ ಓಪನ್ ಸಿಲಿಂಡ‌ರ್ ಬಳಸಿ ಸ್ಫೋಟ ನಡೆಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ.

Related Articles

Back to top button