
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾನು ಭಾರತೀಯ ವೈದ್ಯಕೀಯ ಸಂಘ (Indian Medical Association), ಕರ್ನಾಟಕ ರಾಜ್ಯ ಶಾಖೆ ವತಿಯಿಂದ, ಶೈಕ್ಷಣಿಕ ಮತ್ತು ಪೂರಕ ಚಟುವಟಿಕೆಗಳಲ್ಲಿ ನನ್ನ ಸಾಧನೆಗಾಗಿ ನೀಡಲಾದ ವೈಯಕ್ತಿಕ ಪ್ರಶಸ್ತಿ ಸ್ವೀಕರಿಸಿದ್ದು ನನಗೆ ಅತ್ಯಂತ ಗೌರವದ ವಿಷಯವಾಗಿದೆ ಎಂದು ವೈದ್ಯರಾದ ಡಾ. ಜ್ಞಾನೇಶ ಮೋರಕರ ತಿಳಿಸಿದ್ದಾರೆ.
91ನೇ ಕಿಶ್ಕಿಂದಾ ಮೆಡಿಕಾನ್ 2025, ಐಎಎಂಎ ಗಂಗಾವತಿ ಶಾಖೆ ಇತ್ತೀಚಿಗೆ ಆಯೋಜಿಸಿದ್ದ ಸಮಾರಂಭದಲ್ಲಿ ಕೆಎಲ್ ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರಾದ ಡಾ. ಜ್ಞಾನೇಶ ಮೋರಕರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸು ಮಾತನಾಡ್ದ ಡಾ.ಜ್ಞಾನೇಶ ಮೋರಕರ, ನಿರಂತರ ಪ್ರೋತ್ಸಾಹ ಮತ್ತು ಬೆಂಬಲಕ್ಕಾಗಿ ಐಎಎಂಎ ಬೆಳಗಾವಿ ಶಾಖೆ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು . ನನ್ನ ಮೇಲಿನ ವಿಶ್ವಾಸ ಮತ್ತು ನಂಬಿಕೆಗೆ ನಮ್ಮ ಅಧ್ಯಕ್ಷರಾದ ಡಾ. ಸಚಿನ್ ಮತ್ತು ಕಾರ್ಯದರ್ಶಿ ಡಾ. ಸಾಗರ್ ಅವರಿಗೆ ವಿಶೇಷ ಧನ್ಯವಾದಗಳು. ನನ್ನ ಸಾಧನೆಯಲ್ಲಿ ಮಾರ್ಗದರ್ಶನ ಮತ್ತು ಆಶೀರ್ವಾದ ನೀಡಿದ ತಾಯಿ-ತಂದೆ ಹಾಗೂ ದೇವರಿಗೆ ನನ್ನ ಕೃತಜ್ಞತೆಗಳು ಎಂದು ತಿಳಿಸಿದರು.
ಪ್ರಶಸ್ತಿ ಪಡೆದ ಡಾ. ಜ್ಞಾನೇಶ ಮೋರಕರ ಅವರನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಕರ್ನಲ್ ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.
I am honoured to receive an individual catogery award for my academic and extracurricular achievements from the Indian Medical Association, Karnataka State Branch, during the 91st KISHKINA MEDICON 2025, hosted by IMA Gangavathi Branch on 25–26 October 2025.
I extend my sincere gratitude to the IMA Belagavi Branch and all the office bearers for their continued support and encouragement.
My heartfelt thanks to our President, Dr. Sachin, and Secretary, Dr. Sagar, for their trust and confidence in me.
I also express my deep appreciation to my parents and thank God for their blessings and guidance that have inspired me throughout this journey.




