Kannada NewsLatest

*BREAKING: ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ ಪ್ರಕರಣ: ಕನ್ನಡಿಗ ಯಾತ್ರಾರ್ಥಿಯೂ ಸಾವು*

ಪ್ರಗತಿವಾಹಿನಿ ಸುದ್ದಿ: ಸೌದಿ ಅರೇಬಿಯಾದಲ್ಲಿ ಬಸ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 45 ಭಾರತೀಯ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ಅವರಲ್ಲಿ ಕನ್ನಡಿಗ ಕೂಡ ಇದ್ದಾರೆ ಎದು ತಿಳಿದುಬಂದಿದೆ.

ಸೌದಿಯ ಮೆಕ್ಕಾ-ಮದೀನಾ ರಸ್ತೆಯಲ್ಲಿ ಬಸ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ, ಬಸ್ ಬೆಂಕಿಯಲ್ಲಿ ಹೊತ್ತಿ ಉರಿದಿತ್ತು. ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಬಹುತೇಕ ಯಾತ್ರಾರ್ಥಿಗಳಾಗಿದ್ದು, ತೆಲಂಗಾಣದವರು ಎಂದು ಹೇಳಲಾಗಿತ್ತು. ಆದರೆ ಈಗ ಮೃತರಲ್ಲಿ ಓರ್ವ ಕನ್ನಡಿಗನ ಪಾಸ್ ಪೋರ್ಟ್ ಲಭ್ಯವಾಗಿದೆ.

ಹೈದರಾಬಾದ್ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಸೌದಿಯಲ್ಲಿ ಮೃತಪಟ್ಟ ಓರ್ವ ಕರ್ನಾಟಕದ ಹುಬ್ಬಳ್ಳಿಯವರಿರಬಹುದು. ಪಾಸ್ ಪೋರ್ಟ್ ನಲ್ಲಿ ಕರ್ನಾಟಾದ ಹುಬ್ಬಳ್ಳಿಯ ವಿಳಾಸವಿದೆ. ಅವರ ಮೂಲ ಪತ್ತೆ ಹಚ್ಚುವ ನಿಟ್ಟಿನಲ್ಲಿ ಮುಂದಾಗಿದ್ದೇವೆ ಎಂದು ತಿಳಿದಿದ್ದಾರೆ.


Home add -Advt

Related Articles

Back to top button