
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯ ಕಿತ್ತೂರು ಚೆನ್ನಮ್ಮ ಮೃಗಾಲಯದಲ್ಲಿ 31 ಕೃಷ್ಣಮೃಗಗಳ ಸಾವಿಗೆ ಕಾರಣ ಪತ್ತೆಯಾಗಿದೆ. ಈ ಬಗ್ಗೆ ಮೃಗಾಲಯದ ಎಸಿ ಎಫ್ ನಾಗರಾಜ್ ಬಾಳೆಹೊಸೂರ್ ಮಾಹಿತಿ ನೀಡಿದ್ದಾರೆ.
ಕೃಷ್ಣಮೃಗಗಳ ಸಾವಿಗೆ ಹೆಚ್ ಎಸ್ ಬ್ಯಾಕ್ಟೀರಿಯಾ ಕಾರಣ. ಸಾಂಕ್ರಾಮಿಕ ರೋಗದಿಂದಾಗಿ ಕೃಷ್ಣಮೃಗಗಳು ಸಾವನ್ನಪ್ಪಿದೆ ಎಂದಿ ದೃಢವಾಗಿದೆ ಎಂದಿದ್ದಾರೆ.
31 ಕೃಷ್ಣಮೃಗಗಳ ಸಾವಿಗೆ ಹಿಮೊರೇಜಿಕ್ ಸೆಪ್ಟಿಪ್ಸೆಮಿಯಾ ಎಂಬ ಬ್ಯಾಕ್ಟೀರಿಯಾ (ಗಳಲೆ ರೋಗ) ಕಾರಣ ಎಂದು ದೃಧವಾಗಿದೆ. ಕೃಷ್ಣಮೃಗಗಳ ಸಾವಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವೈರಾಣು ತಜ್ಞ ಡಾ.ಚಂದ್ರಶೇಖರ್ ಮೃಗಾಲಯದ ಅಧಿಕಾರಿಗಳಿಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಹೆಚ್ ಎಸ್ ಬ್ಯಾಕ್ಟೀರಿಯಾದಿಂದಲೇ ಕೃಷ್ಣಮೃಗಗಳು ಮೃತಪಟ್ಟಿವೆ. ಮತ್ತೊಂದೆಡೆ ಹಠಾತ್ ತಾಪಮಾನ ಕುಸಿತ, ಒತ್ತಡದಿಂದಾಗಿಯೂ ಕೃಷ್ಣಮೃಗಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಉಳಿದ ಕೃಷ್ಣಮೃಗಗಳು ಹಾಗೂ ಇತರ ಪ್ರಾಣಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.



