*ಬಲಭಾಗದಲ್ಲಿ ಹೃದಯ: ಅಪರೂಪದ ಪ್ರಕರಣದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಸೆಂಟ್ರಾಕೇರ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ*


ಪ್ರಗತಿವಾಹಿನಿ ಸುದ್ದಿ: ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ 70 ವರ್ಷದ ಕೃಷಿಕನಿಗೆ ತೀವ್ರವಾದ ಎದೆ ನೋವು, ವಿಪರೀತ ಬೆವರು, ಆಶಕ್ತತೆ ಮತ್ತು ಉಸಿರಾಟದ ತೊಂದರೆಯಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳೀಯ ವೈದ್ಯರು ಹೃದಯ ಸ್ಥಂಭನ ವಾಗಿರುವದನ್ನು ಅರಿತು ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ತಿಲಕವಾಡಿಯ ಸೆಂಟ್ರಾಕೇರ್ ಆಸ್ಪತ್ರೆಗೆ ಕಳುಹಿಸಿದರು.
ಹೃದ್ರೋಗ ತಜ್ಞ ಡಾ. ಶಹಬಾಜ್ ಪಟೇಲ್ ರೋಗಿಯ ECG ಯಲ್ಲಿ ಅಸಹಜತೆ ಮತ್ತು ಹೃದಯ ಬಡಿತವು ಬಲಗಡೆಯಿಂದ ಉತ್ಪತ್ತಿಯಾಗುತ್ತಿರುವದನ್ನು ಗಮನಿಸಿದರು. ಎದೆಯ ಕ್ಷ-ಕಿರಣ ಮತ್ತು ವಿವರವಾದ ಪರೀಕ್ಷೆಗಳು, ರೋಗಿಯು ಅಪರೂಪದ, ಅಸಾಮಾನ್ಯವಾದ ‘ಸೈಟಸ್ ಇನ್ವರ್ಸಸ್’ (Situs Inversus) ಎಂಬ ವೈದ್ಯಕೀಯ ಸ್ಥಿತಿಯನ್ನು ಹೊಂದಿರುವುದನ್ನು ಬಹಿರಂಗಪಡಿಸಿತು.
‘ಸೈಟಸ್ ಇನ್ವರ್ಸಸ್’ಎಂಬುದು ಅಪರೂಪದ ವೈದ್ಯಕೀಯ ಅಂಗ ರಚನೆ, ಇದರಲ್ಲಿ ಎದೆ ಮತ್ತು ಹೊಟ್ಟೆಯಲ್ಲಿರುವ ಪ್ರಮುಖ ಅಂಗಾಂಗಗಳು ಅವುಗಳ ಸಾಮಾನ್ಯ ಸ್ಥಳಕ್ಕೆ ವಿರುದ್ಧವಾಗಿ ಕನ್ನಡಿ-ಪ್ರತಿಬಿಂಬದಂತೆ ಇರುತ್ತವೆ. ಈ ರೋಗಿಯ ಹೃದಯ ಬಲಭಾಗದಲ್ಲಿ, ಪಿತ್ತಜನಕಾಂಗವು ಎಡಭಾಗದಲ್ಲಿ ಮತ್ತು ಹೊಟ್ಟೆಯು ಬಲಭಾಗದಲ್ಲಿ ಇತ್ತು. ಈ ರೀತಿಯ ‘ಅದಲು-ಬದಲಾದ’ ವೈದ್ಯಕೀಯ ಅಂಗರಚನೆ ಅತ್ಯಂತ ವಿರಳ. ಅದಲು-ಬದಲಾದ ಅಂಗಾಂಗಳ ಹೃದಯದ ಉಪಚಾರವು ಸಹ ಅತ್ಯಂತ ಕ್ಲಿಷ್ಟ ಮತ್ತು ಸವಾಲಿನದಾಗಿರುತ್ತದೆ.
ಈ ಪ್ರಕರಣದ ಸಂಕೀರ್ಣತೆಯನ್ನು ಅರಿತ, ಡಾ. ಪಟೇಲ್ ಅವರು ಕರೋನರಿ ಆಂಜಿಯೋಗ್ರಾಮ್ ಪ್ರಕ್ರಿಯೆಯಲ್ಲಿ ಬಲಭಾಗದ ಅಪಧಮನಿಯಲ್ಲಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿ ರಕ್ತವು ಸಾರಾಗವಾಗಿ ಸಾಗುವಲ್ಲಿ ಅಡೆತಡೆಯಾಗಿರುವದನ್ನು ದೃಢಪಡಿಸಿಕೊಂಡ ಡಾ. ಶಬಾಜ್ ಪಟೇಲ್ ಮತ್ತು ಅವರ ತಂಡವು ಕನ್ನಡಿ-ಪ್ರತಿಬಿಂಬದ ಅಂಗರಚನಾಶಾಸ್ತ್ರವನ್ನು ಯಶಸ್ವಿಯಾಗಿ ನಿಭಾಯಿಸಿ, ‘ಪ್ರೈಮರಿ ಆಂಜಿಯೋಪ್ಲಾಸ್ಟಿ’ (Primary Angioplasty) ಯ ಮೂಲಕ ಹೆಪ್ಪುಗಟ್ಟಿದ ರಕ್ತವನ್ನು ತಗೆದು ಯಶಸ್ವಿಯಾಗಿ ಆ ಸ್ಥಳದಲ್ಲಿ ಸ್ಟೆಂಟ ಅಳವಡಿಸಿದರು.
‘ಸೈಟಸ್ ಇನ್ವರ್ಸಸ್ʼ ಬಹಳ ಅಪರೂಪ, ಪ್ರೈಮರಿ ಆಂಜಿಯೋಪ್ಲಾಸ್ಟಿಯ ಮುಖಾಂತರ ಸಂಕೀರ್ಣ ಮತ್ತು ಸವಾಲಿನ ವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿ ರೋಗಿಯು ಗುಣಮುಖರಾಗಿರುವದರಿಂದ ನನಗೆ ಖುಷಿಯಾಗಿದೆ ಎಂದು ಡಾ. ಶಹಬಾಜ್ ಪಟೇಲ್ ಹೇಳಿದರು.
ರೋಗಿಯು ಶೀಘ್ರವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾದ ಎರಡನೇ ದಿನವೇ ಬಿಡುಗಡೆಯಾಗಿದ್ದಾರೆ ಎಂದು ಸೆಂಟ್ರಾಕೇರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕಿ ಡಾ. ನೀತಾ ದೇಶಪಾಂಡೆ ಅವರು ತಿಳಿಸಿ, “ಈ ಅಪರೂಪದ ಸಾಧನೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಡಾ. ಶಹಬಾಜ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ”.
ರೋಗಿಯ ಕುಟುಂಬ ಸದಸ್ಯರು ಡಾ. ಪಟೇಲ್ ಅವರ ಕೌಶಲ್ಯ ಮತ್ತು ಸೆಂಟ್ರಕೇರ್ ಆಸ್ಪತ್ರೆಯು ಒದಗಿಸಿದ ಅತ್ಯುತ್ತಮ ಸೌಲಭ್ಯಗಳಿಗಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
Right Sided Heart; Right Treatment at CentraCare Hospital
A 70 Year old farmer from Munavalli (Savadatti Taluk), was rushed to a local hospital with severe chest pain, profuse sweating, generalized weakness and breathlessness. After initial stabilization, he was referred to CentraCare Hospital, Tilakwadi, Belagavi for specialized care.
Consulting Cardiologist Dr. Shahabaz Patel noted abnormal readings on the patient’s ECG. Further diagnostic testing, including a chest X-ray and detailed examination, revealed the unusual complication the patient had ‘Situs Inversus’.
‘Situs Inversus’ is a rare condition where the major organs in the chest and abdomen are positioned as a mirror image of their normal location. In this case, the patient’s heart was on the right side, the liver on the left, and the stomach on the right, posing a significant anatomical challenge for intervention.
Recognizing the case complexity, Dr. Patel proceeded with a Coronary Angiogram, which confirmed a complete occlusion (blockage) of the Right Coronary Artery. Dr. Shahabaz Patel and team successfully navigated the mirror-image anatomy to perform a Primary Angioplasty, removing the plaque and successfully placing a stent in the blocked artery.
“Situs Inversus” is an extremely rare condition, making this Primary Angioplasty complex and challenging. I am professionally satisfied that the procedure was performed successfully,” said Dr. Shahabaz Patel.
The patient recovered well and was shifted to the ward, discharged on the second day of hospitalization, highlighting the procedure’s success and the hospital’s high-level care.
Dr. Neeta Deshpande, Medical Director of CentraCare Hospital, extended her congratulations, stating, “We are immensely proud of Dr. Shahabaz and our Cath-Lab team for successfully performing this rare feat. The patient’s family members expressed their profound gratitude for Dr. Patel’s skill and the excellent facilities provided by CentraCare Hospital.



