Kannada NewsKarnataka NewsLatestPolitics

*ಹಲ್ಲೆ, ಕೊಲೆ ಯತ್ನ ಪ್ರಕರಣ: ನಟಿ, ಕಾಂಗ್ರೆಸ್ ನಾಯಕಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸಾಮಾಜಿಕ ಕಾರ್ಯಕರ್ತ ಟಿ.ಅಜ್ಗರ್ ಮೇಲೆ ಹಲ್ಲೆ ಹಾಗೂ ಕೊಲೆ ಯತ್ನ ಆರೋಪದಲ್ಲಿ ನಟಿ, ಮಾಡೆಲ್, ಕಾಂಗ್ರೆಸ್ ನಾಯಕಿ ಸವಿತಾಬಾಯಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯಲ್ಲಿ ನವೆಂಬರ್ 10ರಂದು ಅಜ್ಗರ್ ಎಂಬ ಸಾಮಾಜಿಕ ಕಾರ್ಯಕರ್ತನ ಮೇಲೆ ಹಲ್ಲೆ, ಕೊಲೆ ಯತ್ನ ನಡೆದಿತ್ತು. ಈ ಪ್ರಕರಣದಲ್ಲಿ ರೌಡಿ ಶೀಟರ್ ಖಾಲಿದ್ ಪೈಲ್ವಾನ್ ಎಂಬಾತನಿಗೆ ಸಾಥ್ ನೀಡಿದ ಆರೋಪದಲ್ಲಿ ಸವಿತಾಬಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು.

ಹಲ್ಲೆಗೊಳಗಾದ ಅಜ್ಗರ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ, ನಟಿ, ಮಾಡೆಲ್ ಸವಿತಾಬಾಯಿ ಮಲ್ಲೇಶ್ ಅವರನ್ನು ಬಂಧಿಸಲಾಗಿದೆ.

Home add -Advt

ಸವಿತಾಬಾಯಿ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೆಲ ಸಿನಿಮಾ ಹಾಗೂ ಜಾಹೀರಾತಿನಲ್ಲಿಯೂ ಅಭಿನಯಿಸಿದ್ದಾರೆ.


Related Articles

Back to top button