Kannada NewsLatestNationalPoliticsTravel

*ಸಿಂಧ್ ಪ್ರದೇಶ ಭಾರತಕ್ಕೆ ಸೇರಬಹುದು: ಅಚ್ಚರಿಯ ಹೇಳಿಕೆ ನೀಡಿದ ರಾಜನಾಥ್ ಸಿಂಗ್*

ಪ್ರಗತಿವಾಹಿನಿ ಸುದ್ದಿ: ಸಿಂಧ್ ಪ್ರದೇಶವು ಇಂದು ಭಾರತದ ಜೊತೆ ಇಲ್ಲದೇ ಇರಬಹುದು. ಆದರೆ ಮುಂದಿನ ದಿನಗಳಲ್ಲಿ ಗಡಿಗಳು ಬದಲಾಗಬಹುದು ಮತ್ತು ಆ ಪ್ರದೇಶವು ಭಾರತಕ್ಕೆ ಮರಳಬಹುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಲಾಲ್ ಕೃಷ್ಣ ಅಡ್ವಾಣಿ ಅವರು ತಮ್ಮ ಪುಸ್ತಕವೊಂದರಲ್ಲಿ ಸಿಂಧಿ ಜನರು ಹಿಂದೂಗಳು ಎಂದಿದ್ದಾರೆ. ವಿಶೇಷವಾಗಿ ಅವರ ಪೀಳಿಗೆಯವರು ಇನ್ನೂ ಭಾರತದಿಂದ ಸಿಂಧ್ ಅನ್ನು ಬೇರ್ಪಡಿಸುವುದನ್ನು ಒಪ್ಪಿಕೊಂಡಿಲ್ಲ ಎಂದು ಬರೆದಿದ್ದಾರೆ ಎಂದು ಅವರು ನೇನಪಿಸಿಕೊಂಡರು.

ಸಿಂಧ್‌ನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಹಿಂದೂಗಳು ಸಿಂಧ್ ನದಿಯನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಸಿಂಧ್‌ನ ಅನೇಕ ಮುಸ್ಲಿಮರು ಸಿಂಧ್‌ನ ನೀರು ಮೆಕ್ಕಾದ ಆಬ್-ಎ-ಜಮ್ಜಾಮ್‌ನಷ್ಟೇ ಪವಿತ್ರವಾಗಿದೆ ಎಂದು ನಂಬುತ್ತಾರೆ. ಇದು ಅಡ್ವಾಣಿ ಅವರ ಉಲ್ಲೇಖ ಎಂದು ಅವರು ತಿಳಿಸಿದರು.

ಸೆಪ್ಟೆಂಬರ್ 22 ರಂದು ಮೊರಾಕೊದಲ್ಲಿ ಭಾರತೀಯ ಸಮುದಾಯದೊಂದಿಗೆ ನಡೆದ ಸಂವಾದದಲ್ಲಿ ಸಿಂಗ್, ಪಿಒಕೆಯಲ್ಲಿರುವ ಜನರು ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ಭಾರತವು ಯಾವುದೇ ಆಕ್ರಮಣಕಾರಿ ಕ್ರಮಗಳನ್ನು ತೆಗೆದುಕೊಳ್ಳದೆ ಪಿಒಕೆಯನ್ನು ಮರಳಿ ಪಡೆಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ನಂತರ ರಾಜನಾಥ್‌ ಸಿಂಗ್‌ ಅವರಿಂದ ಹೇಳಿಕೆ ಬಂದಿರುವುದು ವಿಶೇಷ. 

Home add -Advt

ಇಂದು ಸಿಂಧ್ ಭೂಮಿ ಭಾರತದ ಭಾಗವಾಗಿಲ್ಲದಿರಬಹುದು. ಆದರೆ ನಾಗರಿಕತೆಯ ದೃಷ್ಟಿಯಿಂದ ಸಿಂಧ್ ಯಾವಾಗಲೂ ಭಾರತದ ಭಾಗವಾಗಿರುತ್ತದೆ ಮತ್ತು ಭೂಮಿಯ ವಿಷಯದಲ್ಲಿ ಗಡಿಗಳು ಬದಲಾಗಬಹುದು. ಯಾರಿಗೆ ಗೊತ್ತು? ನಾಳೆ ಸಿಂಧ್ ಮತ್ತೆ ಭಾರತಕ್ಕೆ ಮರಳಬಹುದು. ಸಿಂಧ್ ನದಿಯನ್ನು ಪವಿತ್ರವೆಂದು ಪರಿಗಣಿಸುವ ನಮ್ಮ ಸಿಂಧ್ ಜನರು ಯಾವಾಗಲೂ ನಮ್ಮವರೇ ಆಗಿರುತ್ತಾರೆ. ಅವರು ಎಲ್ಲಿದ್ದರೂ, ಅವರು ಯಾವಾಗಲೂ ನಮ್ಮವರೇ ಆಗಿರುತ್ತಾರೆ ಎಂದು ಹೇಳಿದರು.

Related Articles

Back to top button