Karnataka NewsLatestPolitics
*ಹೈಕಮಾಂಡ್ ಹೇಳಿದಂತೆ ನಾನೂ ಒಪ್ಪಬೇಕು, ಡಿ.ಕೆ.ಶಿವಕುಮಾರ್ ಕೂಡ ಒಪ್ಪಬೇಕು ಎಂದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಹೈಕಮಾಂಡ್ ಹೇಳಿದರೆ ನಾನೂ ಒಪ್ಪಬೇಕು, ಡಿ.ಕೆ.ಶಿವಕುಮಾರ್ ಕೂಡ ಒಪ್ಪಬೇಕು ಎಂದು ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ. ಅವರ ನಿರ್ಧಾರವೇ ಅಂತಿಮ. ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ನಾಯಕರು ನನ್ನನ್ನೇ ಮುಂದುವರಿ ಎಂದು ಹೇಳಿದರೆ ನಾನೇ ಮುಂದುವರೆಯುತ್ತೇನೆ. ಎಲ್ಲಾ ನಿರ್ಧಾರವೂ ಹೈಕಮಾಂಡ್ ಕೈಯಲ್ಲಿದೆ ಎಂದು ಹೇಳಿದರು.



