Kannada NewsKarnataka NewsPolitics
*ಲಿಂಗಾಯತ ಕೋಟಾದಲ್ಲಿ ನಾನ್ಯಾಕೆ ಸಿಎಂ ಆಗಬಾರದು: ಬಸವರಾಜ ರಾಯರೆಡ್ಡಿ ಹೊಸ ಬಾಂಬ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗುತ್ತಲೆ ಇದೆ. ಈ ನಡುವೆ ಅನೇಕರು ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದೀಗ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕೂಡ ಮುಖ್ಯಮಂತ್ರಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೊಪ್ಪಳದಲ್ಲಿ ಮಾತನಾಡಿದ ಬಸವರಾಜ ರಾಯರೆಡ್ಡಿ ಅವರು, ಲಿಂಗಾಯತ ಕೋಟಾದಲ್ಲಿ ನಾನ್ಯಾಕೆ ಸಿಎಂ ಆಗಬಾರದು. ನನಗೂ ಆಸೆಯಿದೆ ನಾನ್ಯಾಕೆ ಸಿಎಂ ಆಗಬಾರದು..? ಎಂದಿದ್ದಾರೆ.
ಹೌದು ನನಗೂ ಸಿಎಂ ಆಗುವ ಆಸೆ ಇದ್ದರೂ, ಅದನ್ನು ಈಗ ಹೇಳಲು ಸಾಧ್ಯವಿಲ್ಲ. ಪ್ರಸ್ತುತ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ನಮಗೆ ಬಜೆಟ್ ಸಿದ್ಧತೆ ಮಾಡಲು ಸೂಚಿಸಿದ್ದಾರೆ.
ನಾಯಕತ್ವ ಬದಲಾವಣೆ, ಸಿಎಂ ಬದಲಾವಣೆಯ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಪ್ರಕಾರ ಅಧಿಕಾರ ಹಂಚಿಕೆ ಕುರಿತ ಚರ್ಚೆಯೇ ಅರ್ಥಹೀನವಾದದ್ದು. ಸಿದ್ದರಾಮಯ್ಯ ಐದು ವರ್ಷ ಸಿಎಂ ಸ್ಥಾನದಲ್ಲಿ ಇರ್ತಾರೆ. ಸಿಎಲ್ ಪಿ ಸಭೆಯಲ್ಲಿ ಕೂಡ ಈ ಅಧಿಕಾರ ಹಂಚಿಕೆ ಬಗ್ಗೆ ಯಾರೂ ಏನೂ ಹೇಳಿಲ್ಲ ಎಂದಿದ್ದಾರೆ.




