
ಪ್ರಧಾನಿ ಮೋದಿಗೆ ‘ಭಾರತ ಭಾಗ್ಯವಿದಾತ’ ಬಿರುದು ನೀಡಿ ಸನ್ಮಾನಿಸಿದ ಸುಗುಣೇಂದ್ರ ತೀರ್ಥರು
ಪ್ರಗತಿವಾಹಿನಿ ಸುದ್ದಿ: ಪರ್ಯಾಯ ಪುತ್ತಿಗೆ ಮಠ ಮತ್ತು ಶ್ರೀಕೃಷ್ಣಮಠಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸಿದ್ದು, ಲಕ್ಷ ಕಂಠ ಗೀತಾ ಪರಾಯಣದಲ್ಲಿ ಪಾಲ್ಗೊಂಡಿದ್ದಾರೆ.
ಉಡುಪಿಗೆ ಆಗಮಿಸಿದ ಪ್ರಧಾನಿ ಮೋದಿ ಆದಿ ಉಡುಪಿಯಿಂದ ಶ್ರೀಕೃಷ್ಣಮಠದವರೆಗೆ ಭರ್ಜರಿ ರೋಡ್ ಶೋ ನಡೆಸಿದರು. ಬಳಿಕ ಅಷ್ಠಮಠಗಳ ವತಿಯಿಂದ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಾಯಿತು. ಬಳಿಕ ಪ್ರಧಾನಿ ಮೋದಿ ಕನಕನ ಕಿಂಡಿ ಮೂಲಕವಾಗಿ ಶ್ರೀಕೃಷ್ಣನ ದರ್ಶನ ಪಡೆದರು. ಇದೇ ವೇಳೆ ಕನಕನಕಿಂಡಿಗೆ ಸ್ವರ್ಣ ಹೊದಿಕೆ ಲೋಕಾರ್ಪಣೆ ಮಾಡಿದರು. ಬಳಿಕ ಮುಖ್ಯಪ್ರಾಣ ದೇವರು ಹಾಗೂ ಗರುಡ ದೇವರ ದರ್ಶನ ಪಡೆದರು.
ಬಳಿಕ ಶ್ರೀಕೃಷ್ಣಮಠದ ಆವರಣದಲ್ಲಿ ವಿಶ್ವ ಗೀತಾ ಪಾರಾಯಣ ಹಿನ್ನೆಲೆಯಲ್ಲಿ ನಡೆದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡರು. ಈ ವೇಳೆ ಪುತ್ತಿಗೆಮಠದ ಸುಗುಣೇಂದ್ರ ತೀರ್ಥರು, ಸುಶಿರೀಂದ್ರ ತೀರ್ಥ ಸ್ವಾಮಿಜಿಗಳ ಸನ್ನಿಧಿಯಲ್ಲಿ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಗವದ್ಗೀತೆಯ ಶ್ಲೋಕಗಳನ್ನು ಪ್ರಧಾನಿ ಮೋದಿ ಪಠಿಸಿದರು.
ಇದೇ ವೇಫೆ ಪ್ರಧಾನಿ ಮೋದಿಯವರಿಗೆ ಸುಗುಣೇಂದ್ರ ತೀರ್ಥರು ‘ಭಾರತ ಭಾಗ್ಯವಿದಾತ’ ಬಿರುದು ನೀಡಿ ಸನ್ಮಾನಿಸಿದರು. ರಾಷ್ಟ್ರಾ ರಕ್ಷಾ ಕವಚ, ಶ್ರೀಕೃಷ್ಣನ ಫೋಟೋ ನೀಡಿ ಪ್ರಧಾನಿ ಮೋದಿಯವರನ್ನು ಸನ್ಮಾನಿಸಿದರು.




