Belagavi NewsBelgaum NewsCrimeKannada NewsKarnataka NewsLatest

*ಲೈಂಗಿಕ ದೌರ್ಜನ್ಯ: ಆರೋಪಿಗೆ 30 ವರ್ಷ ಕಠಿಣ ಜೈಲುಶಿಕ್ಷೆ ಪ್ರಕಟ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ- 2012 ಅಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ 30 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.

ಈ ಪ್ರಕರಣದಲ್ಲಿ ಪೂರ್ಣ ಪ್ರಮಾಣ ತನಿಖೆಯನ್ನು ಕೈಗೊಂಡು ದೋಷಾರೋಪ ಪತ್ರ ತಯಾರಿಸಿ, ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ವಿಶೇಷ ಶೀಘ್ರಗತಿ/ಪೋಕ್ಲೋ ನ್ಯಾಯಾಲಯ-1) ಸಲ್ಲಿಸಿ ನ್ಯಾಯಾಲಯದಿಂದ ಎಸ್.ಸಿ ನಂ. 452/2024 ನೇದ್ದನ್ನು ಪಡೆದುಕೊಳ್ಳಲಾಗಿತ್ತು.

ನಂತರ ಈ ಪ್ರಕರಣವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾರದ ಸಿ. ಎಮ್. ಪುಷ್ಪಲತಾ (ವಿಶೇಷ ಶೀಘ್ರಗತಿ/ಪೋಕ್ಸೋ ನ್ಯಾಯಾಲಯ-1) ಅವರು ಸುಧೀರ್ಘವಾಗಿ 1 ವರ್ಷ 4 ತಿಂಗಳುಗಳ ಕಾಲ ವಿಚಾರಣೆ ನಡೆಸಿ, ಈ ಪ್ರಕರಣದಲ್ಲಿಯ ಆರೋಪಿ ನಾಗರಾಜ ಹೊಳೆಪ್ಪ ರಂಗಿ, ಇತನಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 10,000 ರೂ.ಗಳ ದಂಡ ಶಿಕ್ಷೆ ವಿಧಿಸಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಲ್. ವಿ. ಪಾಟೀಲ ಅವರು ವಾದ ಮಂದ್ದಡಿಸಿದರು.‌

Home add -Advt

Related Articles

Back to top button