
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಾಕು ನಾಯಿಗಳ ದಾಳಿಗೆ ಜನರು ಬಲಿಯಾಗುತ್ತಿರುವ ಹಲವು ಪ್ರಕರಣಗಳು ನಡೆಯುತ್ತಿವೆ. ರಾಟ್ ವೀಲರ್ ನಾಯಿಗಳ ದಾಳಿಯಿಮ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆಯ ಹೊರವಲಯದ ಹೊನ್ನೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಮೇಲೆ ರಾಟ್ ವೀಲರ್ ನಾಯಿಗಳು ದಾಳಿ ನಡೆಸಿವೆ.
ತಡರಾತ್ರಿ ಜಮೀನಿನಲ್ಲಿ ನಾಯಿಗಳ ಮಾಲೀಕ ರಾಟ್ ವೀಲರ್ ನಾಯಿಗಳನ್ನು ಬಿಟ್ಟಿದ್ದರು. ಇಂದು ಬೆಳಿಗ್ಗೆ ಮಹಿಳೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ರಾಟ್ ವೀಲರ್ ನಾಯಿಗಳು ಮಹಿಳೆ ಮೇಲೆ ದಾಳಿ ನಡೆಸಿವೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ. 38 ವರ್ಷದ ಅನಿತಾ ಮೃತ ಮಹಿಳೆ ಎಂದು ತಿಳಿದುಬಂದಿದೆ.



