Kannada NewsKarnataka NewsPolitics

*ಸಂಕ್ರಾತಿ ಬಳಿಕ ಸಿಎಂ ಬದಲಾವಣೆ: ಸ್ಫೋಟಕ ಭವಿಷ್ಯ ನುಡಿದ ಕೋಡಿ ಶ್ರೀ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿ ಇರುವಾಗಲೇ ಕೋಡಿಮಠದ ಪೀಠಾಧಿಪತಿ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,  ಸಿಎಂ ಸಿದ್ದರಾಯಮ್ಯ ಅವರು ಮುಖ್ಯಮಂತ್ರಿ  ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕೋಡಿ ಶ್ರೀ ತಿಳಿಸಿದ್ದಾರೆ.

ಡಿಕೆಶಿಗೆ ಸಿಎಂ ಸ್ಥಾನ ಸಿಗುತ್ತದೆಯೇ ಎಂಬ ಪ್ರಶ್ನೆಗೆ ಕೋಡಿಶ್ರೀಗಳು ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಒಬ್ಬ ಬೇಡ ಜಿಂಕೆ ಕಾಡಿನಲ್ಲಿ ಓಡಿಸಿಕೊಂಡು ಬಂದ ಅಲ್ಲಿ ಒಬ್ಬ ಸನ್ಯಾಸಿ ಕೂತಿದ್ದ ಆಗ ಬೇಡ ಸನ್ಯಾಸಿ ಕೇಳಿದ ಜಿಂಕೆ ಹೋಯಿತಾ ಅಂತ, ಆಗ ಸನ್ಯಾಸಿ ನೋಡಿದೆ ಅಂದರೆ ಬೇಡ ಜಿಂಕೆಯನ್ನು ಕೊಲ್ಲುತ್ತಾನೆ, ನೋಡಲಿಲ್ಲ ಅಂದ್ರೆ ಸನ್ಯಾಸತ್ವಕ್ಕೆ ಅಲ್ವ ಯಾವುದು ಮಾತ್ನಾಡಲಿಲ್ಲ ಅದು ನಾನು ನೋಡಲಿಲ್ಲ. ಕಣ್ಣು ನೋಡು ಅದು ಮಾತಾಡಲ್ವ, ನಾಲಿಗೆ ನೋಡಿಲ್ಲ ಮಾತನಾಡುತ್ತೆ ಅಷ್ಟೆ ಅರ್ಥ ಎಂದಿದ್ದಾರೆ

ರಾಜ್ಯ ರಾಜಕೀಯವು ಸಂಕ್ರಾಂತಿ ಆದ ಬಳಿಕ ನಿರ್ಧಾರ ಆಗುತ್ತದೆ. ಸಂಗಮೇಶನೊಲಿವನೆ, ಆದರೆ ಒಳ ಅಡ್ಡ ಬಂದಿದೆ. ಶಿವನ ಮುಡಿಯ 2 ತುಂಡು ಮಲ್ಲಿಗೆಗಳು ಶಿವನ ಬಲಪಾದ ಸೇರ್ಯಾವೆ, ಮುಂದೆ ಸುಖಾಂತ್ಯ ಆದೀತು ಎಂದು ಭವಿಷ್ಯ ನುಡಿದಿದ್ದಾರೆ.

Home add -Advt

ಅಂದರೆ ರಾಜ್ಯ ಸರ್ಕಾರಕ್ಕೆ ಮುಂದಿನ ಸಂಕ್ರಾಂತಿವರೆಗೆ ಯಾವುದೇ ತೊಂದರೆಯಿಲ್ಲ ಅದರಲ್ಲೂ ಸಿದ್ದರಾಮಯ್ಯ ಅವರಿಗೆ ತೊಂದರೆಯಿಲ್ಲ ಅದಾದ ಬಳಿಕವೇ ಅವರು ತಾವಾಗಿಯೇ ಅಂದರೆ, ಸಂಕ್ರಾಂತಿ ಬಳಿಕ ಬಜೆಟ್ ಮುಗಿದ ಮೇಲೆ ಸಿಎಂ ತಮ್ಮ ಸ್ಥಾನವನ್ನು ತೈಜಿಸಲಿದ್ದಾರೆ. ಮುಂದಿನ ಸಂಕ್ರಾಂತಿ ಬಳಿಕ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ. ಅಷ್ಟೇ ಅಲ್ಲದೇ ರಾಜಕೀಯದಲ್ಲಿ ಹಲವು ಬದಲಾವಣೆಯಾಗಲಿದೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆ. ಅದೇ ರೀತಿಯಲ್ಲಿ 2026 ಕ್ಕೆ ಇನ್ನು ಮಳೆ ಅವಾಂತರ ಹೆಚ್ಚಾಗುತ್ತೆ ಎಂದು ತಿಳಿಸಿದ್ದಾರೆ.

ಈ ಹಿಂದೆಯೂ ಕೂಡ ಕೋಡಿ ಮಠದ ಪೀಠಾಧಿಪತಿ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯಲಿದ್ದಾರೆ ಎಂದು ಹೇಳಿದ್ದರು. ಇದೀಗ ಮತ್ತೆ ಪುನರುಚ್ಚರಿಸಿದ್ದು, ಯಾವಾಗ ಇಳಿಯಲಿದ್ದಾರೆ ಎನ್ನುವುದನ್ನು ತಿಳಿಸಿದ್ದಾರೆ.

Related Articles

Back to top button