Karnataka NewsNationalPolitics

*ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ರಾಜ್ಯಸಭೆಯಲ್ಲಿ ಗಮನ ಸೆಳೆದ ಸಂಸದ ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಕುರಿತಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಂಸತ್ ಗಮನ ಸೆಳೆದರು.

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದ ಈರಣ್ಣ ಕಡಾಡಿ, ಕರ್ನಾಟಕದ ಕಬ್ಬು ಬೆಳೆಯುವ ಕೋಟ್ಯಾಂತರ ರೈತರು ಮತ್ತು ಸಕ್ಕರೆ ಉದ್ಯಮಕ್ಕೆ ಸಂಬಂಧಿಸಿದಂತೆ ಕಬ್ಬಿನ ರಿಕವರಿ ದರವನ್ನು ಇಳಿಕೆ ಮಾಡುವುದು, ಕಬ್ಬು ಕಟಾವು ಮತ್ತು ಸಾರಿಗೆ ಹೊರತು ಪಡಿಸಿ ಎಫ್.ಆರ್.ಪಿ ದರ ನಿಗದಿ ಮಾಡುವುದು, ಸಕ್ಕರೆಯ ಎಂ.ಎಸ್.ಪಿ ದರವನ್ನು ಹೆಚ್ಚಿಗೆ ಮಾಡುವುದು ಹಾಗೂ ಕರ್ನಾಟಕ ರಾಜ್ಯಕ್ಕೂ ಕೂಡಾ ಎಥೆನಾಲ ಮಾರಾಟಕ್ಕೆ ಹೆಚ್ಚಿನ ಅವಕಾಶ ನೀಡಬೇಕೆಂದು ಎಂದು ಒತ್ತಾಯಿಸಿದರು.

Home add -Advt

Related Articles

Back to top button