Belagavi NewsBelgaum NewsKannada NewsKarnataka NewsLatest

*ವೃದ್ಧಾಶ್ರಮ, ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಪ್ರಯತ್ನ ಸಂಘಟನೆ ನೆರವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ  ತಾಲೂಕಿನ ಹಿಡಕಲ್ ಅಣೆಕಟ್ಟಿನ ಬಳಿ  ಇರುವ ಆಸರೆ ವೃದ್ಧಾಶ್ರಮ ಹಾಗೂ ಶಕ್ತಿ ಸದನ  ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಪ್ರಯತ್ನ ಸಂಘಟನೆ ಸದಸ್ಯರು  ಭೇಟಿ ನೀಡಿ, ಆಶ್ರಯದಲ್ಲಿರುವ ವೃದ್ಧರು ಮತ್ತು ಮಹಿಳೆಯರ  ಚಟುವಟಿಕೆಗಳನ್ನು  ವೀಕ್ಷಿಸಿ  ಫಲಾನುಭವಿಗಳಿಗೆ ಹಣ್ಣು-ಹಂಪಲು ಹಾಗೂ ದವಸ-ಧಾನ್ಯಗಳನ್ನು ದೇಣಿಗೆಯ ರೂಪದಲ್ಲಿ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಯತ್ನ ಸಂಘಟನೆಯ ಅಧ್ಯಕ್ಷೆ ಶಾಂತಾ ಆಚಾರ್ಯ ಅವರು, “ಜೀವನದ ಕಲಿಕೆಯ ಹಂತದಲ್ಲಿ ಕಷ್ಟಗಳನ್ನು    ನೋಡಿದರೆ ಪ್ರತಿಯೊಬ್ಬರೂ ಬೆಳೆಯಬಹುದು. ಎಲ್ಲರಿಗೂ ಸವಾಲುಗಳಿರುತ್ತವೆ, ಆದರೆ ಅವನ್ನು ಜಯಿಸುವುದೇ ನಿಜವಾದ ಬೆಳವಣಿಗೆ. ಮಹಿಳಾ ಕಲ್ಯಾಣ ಸಂಸ್ಥೆಯಂತಹ ಸಂಘಟನೆಗಳು ನಮ್ಮ ಜೊತೆಗೆ ಇದ್ದಾಗ ಹೆದರಬೇಕಾದ ಅಗತ್ಯವಿಲ್ಲ” ಎಂದು ಹೇಳಿದರು.

ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ, “ಸಂಸ್ಥೆ 50 ವರ್ಷಗಳಿಂದ ನಿರಂತರವಾಗಿ  ಸಮಾಜಸೇವೆಯಲ್ಲಿ ತೊಡಗಿದೆ. ಪ್ರಯತ್ನ ಸಂಘಟನೆಯಂತಹ ಅನೇಕರ ಸಹಕಾರದಿಂದ ಫಲಾನುಭವಿಗಳಿಗೆ ಉತ್ತಮ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸುವುದು ಸಾಧ್ಯವಾಗಿದೆ. ಇದೇ ರೀತಿಯಾಗಿ ನಿಮ್ಮ ಬೆಂಬಲ ಮುಂದುವರಿಯಲಿ, ಪ್ರಯತ್ನ ಸಂಘಟನೆಯ ಕಾರ್ಯ ಶ್ಲಾಘನೀಯ” ಎಂದು  ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಯತ್ನ ಸಂಘಟನೆಯ ಸದಸ್ಯರಾದ  ವೀಣಾ ಕುಲಕರ್ಣಿ, ಪದ್ಮಾ ವೆರ್ಣೇಕರ, ಆರತಿ ಭಟ್, ಶರಾವತಿ ಕುಲಕರ್ಣಿ,  ಆರತಿ ಕುಲಕರ್ಣಿ, ಬೀನಾ ರಾವ್, ಗೌರಿ ಸರ್ನೋಬಟ್, ಶ್ವೇತಾ ಬಿಜಾಪುರೇ, ವರದಾ ಭಟ್, ಮೇಧಾ, ವೈಜಯಂತಿ ಚೌಗಲಾ, ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ಆರ್‌ಜೆ ಚೇತನ, ಶಕ್ತಿ ಸದನದ ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಗಂಧ ಮುಕಾಶಿ ನಿರೂಪಿಸಿದರು. ಶಾಹಿನ್ ಹೊಂಬಾಳ ಅವರು ವಂದನಾರ್ಪಣೆ ಸಲ್ಲಿಸಿದರು.

Home add -Advt

Related Articles

Back to top button