Kannada NewsKarnataka NewsNationalPolitics

*ಉತ್ತರ ಕರ್ನಾಟಕಕ್ಕೆ ಅತೀ ಹೆಚ್ಚು ಅನ್ಯಾಯ ಆಗಿರುವುದು ಕಾಂಗ್ರೆಸ್ ನಿಂದ: ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ಪಿ‌ಹೆಚ್ ಡಿ ತೆಗೆದುಕೊಂಡಿದ್ದಾರೆ. ಉತ್ತರ ಕರ್ನಾಟಕಕ್ಕೆ  ಅತಿ ಹೆಚ್ಚು ಅನ್ಯಾಯ ಆಗಿರುವುದು ಕಾಂಗ್ರೆಸ್ ನಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಮೊದಲನೇ ಹಂತ ಪೂರ್ಣ ಮಾಡಲು ಕಾಂಗ್ರೆಸ್ 50 ವರ್ಷ ತೆಗೆದುಕೊಂಡಿದ್ದು,  ಎರಡನೇ ಹಂತದ ಯೋಜನೆ ಕೂಡಾ ಪೂರ್ಣ ಮಾಡಲು ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. 

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ ಮಾಡಿದ್ದು ಬಿಜೆಪಿ ಎಂಬ ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ಪಿ‌ಹೆಚ್ ಡಿ ತೆಗೆದುಕೊಂಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಅತಿ ಹೆಚ್ಚು ಅನ್ಯಾಯ ಆಗಿರುವುದು ಕಾಂಗ್ರೆಸ್ ನಿಂದ ಕೃಷ್ಣ ಮೇಲ್ದಂಡೆ ಯೋಜನೆ ಮೊದಲನೇ ಹಂತ ಪೂರ್ಣ ಮಾಡಲು 50 ವರ್ಷ ತಗೊಂಡಿದ್ದು ಕಾಂಗ್ರೆಸ್. ಕೃಷ್ಣಾ ಎರಡನೇ ಹಂತದ ಯೋಜನೆ ಕೂಡಾ ಪೂರ್ಣ ಮಾಡಲು ಆಗಿಲ್ಲ. ಕೋರ್ಟ್ ನಲ್ಲಿ ಕೇಸ್ ಸಹಿತ ಹಾಕಿರಲಿಲ್ಲ. ಮಹಾರಾಷ್ಟ್ರದವರು ಕೇಸ್ ಹಾಕಿದ್ರು, ನಾವು ಕಳೆದ ಬಾರಿ ಅಸೆಂಬ್ಲಿಯಲ್ಲಿ ಗಲಾಟೆ ಮಾಡಿದ ಮೇಲೆ ಕೇಸ್ ಹಾಕಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ಹೇಳಲು ತಯಾರಾಗಿದ್ದೇವೆ ಎಂದು ಹೇಳಿದರು.

ಒಪ್ಪಂದದಂತೆ ಸಿಎಂ ನಡೆದುಕೊಳ್ತಾರೆ ಎಂಬ ಡಿಸಿಎಂ ಡಿ ಕೆ ಶಿವಕುಮಾರ್  ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಆಟ ಹೈಕಮಾಂಡ್ ಆಡಿಸುತ್ತಿದೆ. ಹೈಕಮಾಂಡೇ ಇಬ್ಬಾಗ ಆಗಿದೆ. ಕಾಂಗ್ರೆಸ್ ಹೈಕಮಾಂಡ್ ಎರಡು ಗುಂಪಾಗಿದೆ. ಹೀಗಾಗಿ ಯಾವುದೇ ನಿರ್ಣಯ ತೆಗೆದುಕೊಳ್ಳಲು  ಆಗುತ್ತಿಲ್ಲ. ಇಬ್ಬರ ನಡುವೆ ಜಗಳ ಹಚ್ಚಿ ಎಲ್ಲಿವರೆಗೂ ಲಾಭ ತಗೊಳೋಕೆ ಆಗುತ್ತದೆಯೋ ತೆಗೆದುಕೊಳ್ಳುತ್ತಾರೆ. ಕರ್ನಾಟಕವನ್ನು ಕಾಂಗ್ರೆಸ್ ಹೈಕಮಾಂಡ್ ಎಟಿಎಂ ತರ ಬಳಕೆ ಮಾಡುತ್ತಾರೆ ಅಷ್ಟೆ ಎಂದು ಹೇಳಿದರು. 

ಆರ್ ಎಸ್ ಎಸ್ ಮಾದರಿ ಸಂಘ ರಚನೆ ಮಾಡುವುದಾಗಿ ಕಾಂಗ್ರೆಸ್ ಎಂ.ಎಲ್ ಸಿ ಹರಿಪ್ರಸಾದ್ ನೀಡೊರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆರ್ ಎಸ್ ಎಸ್ ಮಾದರಿ ಸಂಘಟನೆ ಮಾಡುತ್ತಾರೆ ಅಂದರೆ ಯಾರು ಬೇಡ ಅಂದರು , ಮಾಡಲಿ ಅದನ್ನು ಸ್ವಾಗತಿಸುತ್ತೇವೆ  ಎಂದು ಹೇಳಿದರು.

Home add -Advt

Related Articles

Back to top button