
ಪ್ರಗತಿವಾಹಿನಿ ಸುದ್ದಿ: ರಸ್ತೆಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನನ್ನು ಪ್ರೀತಿಸುತ್ತಿಲ್ಲ ಎಂದು ಯುವಕನೊಬ್ಬ ಯುವತಿಗೆ ಕಿರುಕುಳ ನೀಡುತ್ತಿದ್ದು, ರಸ್ತೆಯಲ್ಲಿಯೇ ಯುವತಿಯನ್ನು ಹಿಡಿದು ಬಟ್ಟೆ ಹರಿದು ಮೈ-ಕೈ ಮುಟ್ಟಿ ಹಿಂಸಿಸಿದ್ದಾನೆ. ಸಂತ್ರಸ್ತ ಯುವತಿಯ ದೂರಿನ ಮೇರೆಗೆ ಬೆಂಗಳೂರುನ ಜ್ಞಾನಭಾರತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನವೀನ್ ಕುಮಾರ್ ಬಂಧಿತ ಆರೋಪಿ. ಇನ್ ಸ್ಟಾ ಗ್ರಾಂ ನಲ್ಲಿ ಯುವತಿ ನವೀನ್ ಗೆ ಪರಿಚಯವಾಗಿದ್ದು, ಬಳಿಕ ನವೀನ್ ಯುವತಿಯ ಹಿಂದೆ ಬಿದ್ದು, ತನ್ನನ್ನು ಪ್ರೀತಿಸುವಂತೆ ಬಲವಂತ ಅಮಡುತ್ತಿದ್ದನಂತೆ. ಆತನ ಕಾಟಕ್ಕೆ ಬೇಸತ್ತು ಯುವತಿ ಮೂರ್ನಾಲ್ಕು ಪಿಜಿ ಬದಲಾಯಿಸಿದ್ದಳಂತೆ. ಎಲ್ಲಿಯೇ ಹೋದರೂ ಅಲ್ಲಿಗೂ ಬಂದು ಪೀಡಿಸುತ್ತಿದ್ದನಂತೆ. ಟೆಲಿಕಾಲರ್ ಕೆಲಸ ಮಾಡುತ್ತಿದ್ದ ಯುವತಿ ನವೀನ್ ಕಾಟದಿಂದ ಬೇಸತ್ತು ಕೆಲಸವನ್ನೂ ಬಿಟ್ಟಿದ್ದಳಂತೆ. ರಸ್ತೆಯಲ್ಲಿ ಹೋಗುತ್ತಿದ್ದ ಯುವತ ಬೆನ್ನು ಬಿದ್ದು ಕಿರುಕುಳ ನೀಡಿದ್ದಾನೆ. ಇದರಿಂದ ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿ ಬಂಧನವಾಗಿದೆ.


